ಬಿಜೆಪಿ,ಜೆಡಿಎಸ್ ನಾಯಕರಿಗೆ ಹತಾಶೆ: ಶೆಟ್ಟರ್ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ- ಡಿಸಿಎಂ ಡಿಕೆ ಶಿವಕುಮಾರ್ .

ಬೆಂಗಳೂರು,ಅಕ್ಟೋಬರ್,18,2023(www.justkannada.in): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಎಲ್ಲದರಲ್ಲೂ ಅನುಮಾನ ಪಡುವುದಕ್ಕೆ ಆಗಲ್ಲ ಎಂದಿದ್ದಾರೆ.

ಬೆಳಗಾವಿಗೆ ತೆರಳುವ ಮುನ್ನ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಪಾಪ ಬಿಜೆಪಿಯವರು ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ. ಜಗದೀಶ್  ಶೆಟ್ಟರ್ ತಮ್ಮ ಶಕ್ತಿ ಏನೇಂದು ತೋರಿಸಿದ್ದಾರೆ ಎಂದು ಟಾಂಗ್ ನೀಡಿದರು.

ಬಿಜೆಪಿಯಲ್ಲಿ ಅಪರೇಷನ್ ಮಾಡಲು ಒಂದು ಟೀಂ ಆಕ್ಟಿವ್ ವಿಚಾರ ಸಂಬಂಧ,   ಯಾರು ಭೇಟಿ ಮಾಢ್ತಿದ್ದಾರೆ ಅಂತಾ ನನಗೆ ಮತ್ತು ಸಿಎಂಗೆ ಹೇಳಿದ್ದಾರೆ. ಬಿಜೆಪಿ ಸೇರುವುದಕ್ಕೆ ಏನು ಆಫರ್ ಮಾಡಿದ್ದಾರೆ ಅಂತಾನೂ  ನಮಗೆ ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words:  Disappointment – BJP-JDS- leaders – DCM -DK Shivakumar.