Saturday, August 8, 2026

BDA Apartments

Home Front Page ಕಾಂಗ್ರೆಸ್ ತಂಬೂರಿ ಹಿಂದೆ ಹೋಗಲು ನಮ್ಮವರೇನು ಇಲಿಗಳಾ..? ಡಿ.ವಿ ಸದಾನಂದಗೌಡ ವ್ಯಂಗ್ಯ.

ಕಾಂಗ್ರೆಸ್ ತಂಬೂರಿ ಹಿಂದೆ ಹೋಗಲು ನಮ್ಮವರೇನು ಇಲಿಗಳಾ..? ಡಿ.ವಿ ಸದಾನಂದಗೌಡ ವ್ಯಂಗ್ಯ.

ಬೆಂಗಳೂರು,ಆಗಸ್ಟ್,19,2023(www.justkannada.in):  ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರುತ್ತಾರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರಸಚಿವ ಡಿ.ವಿ ಸದಾನಂದಗೌಡ, ಕಾಂಗ್ರೆಸ್ ತಂಬೂರಿ ಹಿಂದೆ ಹೋಗಲು ನಮ್ಮವರೇನು ಇಲಿಗಳಾ..? ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ,  ನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ.  ಮೂರೇ ತಿಂಗಳಲ್ಲಿ ಕಾಂಗ್ರೆಸ್ ನಾಟಕ ಗೊತ್ತಾಗಿದೆ.  ಕಾಂಗ್ರೆಸ್ ತಂಬೂರಿ ಹಿಂದೆ ಹೋಗಲು  ನಮ್ಮವರೇನು ಇಲಿಗಳಾ..?  ಭೈರತಿ  ಬಸವರಾಜ್ ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ. ಸೋಮಶೇಖರ್ ಕಾಂಗ್ರೆಸ್ ಸೇರುತ್ತೇನೆ  ಎಂದು ಎಲ್ಲೂ ಹೇಳಿಲ್ಲ. ಅವರ ಕ್ಷೇತ್ರದಲ್ಲಿ ಕೆಲ ಆಂತರಿಕ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.

ಸಿದ್ಧರಾಮಯ್ಯ ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಗೊಂದಲ ಮುಚ್ಚಿಕೊಳ್ಳಲು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಡಿ.ವಿ ಸದಾನಂದಗೌಡ ಲೇವಡಿ ಮಾಡಿದರು.

Key words: BJP-MLAs-congress-join-DV Sadananda gowda