Monday, August 17, 2026

BDA Apartments

Home Front Page ಬಿಜೆಪಿ-ಜೆಡಿಎಸ್ ಹಾಲು ಜೇನು ಇದ್ದಂತೆ- ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಕೆ.ಸುಧಾಕರ್.

ಬಿಜೆಪಿ-ಜೆಡಿಎಸ್ ಹಾಲು ಜೇನು ಇದ್ದಂತೆ- ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಕೆ.ಸುಧಾಕರ್.

ಬೆಂಗಳೂರು,ಮಾರ್ಚ್,25,2024(www.justkannada.in): ಬಿಜೆಪಿ-ಜೆಡಿಎಸ್ ಹಾಲು ಜೇನು ಇದ್ದಂತೆ. ಎರಡೂ ಪಕ್ಷದವರು ಸೇರಿ ಒಂದಾಗಿ ಗೆಲ್ಲಲು ಶ್ರಮ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಕೆ.ಸುಧಾಕರ್,  ನನಗೆ  ಬಿಜೆಪಿ ಚಿಕ್ಕಬಳ್ಳಾಪುರ  ಟಿಕೆಟ್ ನೀಡಿದೆ. ಪ್ರಧಾನಿ ಮೋದಿ ಮಾಜಿ ಸಿಎಂ ಬಿಎಸ್ ವೈ, ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ  ಆಶೀರ್ವಾದಿಂದ ನನಗೆ ಟಿಕೆಟ್ ಸಿಕ್ಕಿದೆ.  ಆಶೋಕ್ ಎಂಟಿಬಿ ನಾಗರಾಜ್ ವಿಜಯೇಂದ್ರ ಸಹಕಾರದಿಂದ ಟಿಕೆಟ್ ಸಿಕ್ಕಿದೆ ನಾವೆಲ್ಲರೂ ಒಂದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಗೆಲುವುವಿಗೆ ಶ್ರಮವಹಿಸಲಿದ್ದೇವೆ ಎಂದರು.

ಮೈತ್ರಿಯಿಂದ ಹೆಚ್ಚು ಸ್ಥಾನ ಬರಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ.  ಎಸ್ ಆರ್ ವಿಶ್ವನಾಥ್  ಹಿರಿಯರು.  ಅವರ ಜೊತೆ ನಾನು ಮಾತನಾಡುವೆ. ಅವರು  ಸಹಕಾರ ನೀಡುವ ವಿಶ್ವಾಸವಿದೆ ಎಂದರು.

Key words: BJP-JDS -milk – like- honey- Chikkaballapur candidate -Dr. K. Sudhakar.