Monday, October 5, 2026

BDA Apartments

ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿಕೊಟ್ಟ ನಟ ಜಗ್ಗೇಶ್ BDA JK_Adv BDA Adv
Home Front Page ಬಿಜೆಪಿ ತೆಕ್ಕೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ…

ಬಿಜೆಪಿ ತೆಕ್ಕೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ…

ಹುಬ್ಬಳ್ಳಿ,ಮೇ,28,2022(www.justkannada.in):  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ.  ಮೇಯರ್, ಉಪ ಮೇಯರ್ ಚುನಾವಣೆ  ಇಂದು ನಡೆದಿದ್ದು, ಕಮಲ ಪಾಳಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಗಿ ಈರೇಶ್ ಅಂಚಟಗೇರಿ ಉಪಮೇಯರ್ ಆಗಿ ಉಮಾ ಮುಕುಂದ ಅವರು ಆಯ್ಕೆಯಾಗಿದ್ದಾರೆ.  ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಪರ 50 ಮತ ಹಾಕಿದ್ದರೇ, ಈರೇಶ್ ವಿರುದ್ದ 35 ಮತ ಚಲಾಯಿಸಿದ್ದು, 3 ತಟಸ್ಥವಾಗಿವೆ. ಬಿಜೆಪಿ ಉಪಮೇಯರ್ ಅಭ್ಯರ್ಥಿ ಉಮಾ ಮುಕುಂದ್ ಪರ 51, ವಿರುದ್ಧ-35, ತಟಸ್ಥ 03 ಮತ ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.ಬಿಜೆಪಿ ತೆಕ್ಕೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ… daaDS

ಹುಬ್ಬಳ್ಳಿ-ಧಾರವಾಡ 82 ವಾರ್ಡ್ ಗಳಿಗೆ ಎಂಟು ತಿಂಗಳ ಹಿಂದೆ ಸೆಪ್ಟೆಂಬರ್ 3 2021 ರಲ್ಲಿ ಚುನಾವಣೆ ನಡೆದಿತ್ತು.ಸೆಪ್ಟೆಂಬರ್ 7 ರಂದು ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು.

Key words: BJP -Hubli-Dharwad-city-corporation