Tuesday, September 22, 2026

BDA Apartments

ಅತಿವೃಷ್ಠಿ, ಅನಾವೃಷ್ಟಿ ವೇಳೆ ತನ್ನ ಕೆಲಸ ಏನೆಂಬುದನ್ನ ಬಿಜೆಪಿ ಸರ್ಕಾರ ಮರೆತ...
Home Front Page ಅತಿವೃಷ್ಠಿ, ಅನಾವೃಷ್ಟಿ ವೇಳೆ ತನ್ನ ಕೆಲಸ ಏನೆಂಬುದನ್ನ ಬಿಜೆಪಿ ಸರ್ಕಾರ ಮರೆತಿದೆ- ಈಶ್ವರ್ ಖಂಡ್ರೆ ವಾಗ್ದಾಳಿ…

ಅತಿವೃಷ್ಠಿ, ಅನಾವೃಷ್ಟಿ ವೇಳೆ ತನ್ನ ಕೆಲಸ ಏನೆಂಬುದನ್ನ ಬಿಜೆಪಿ ಸರ್ಕಾರ ಮರೆತಿದೆ- ಈಶ್ವರ್ ಖಂಡ್ರೆ ವಾಗ್ದಾಳಿ…

ಬೀದರ್,ಅಕ್ಟೋಬರ್,15,2020(www.justkannada.in):  ರೈತರು ಮತ್ತು ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಬಿಜೆಪಿ ಸರ್ಕಾರ ಧಾವಿಸಿಲ್ಲ. ಅತಿವೃಷ್ಠಿ, ಅನಾವೃಷ್ಟಿ ವೇಳೆ ತನ್ನ ಕೆಲಸ ಏನೆಂಬುದನ್ನ ಬಿಜೆಪಿ ಸರ್ಕಾರ ಮರೆತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರ ಕಿಡಿಕಾರಿದರು.jk-logo-justkannada-logo

ಬೀದರ್ ನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರೈತರು ಮತ್ತು ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದ್ದು,  ರೈತರ ಸಂಕಷ್ಟ ಏನು ಎಂಬುದು ಇವರಿಗೆ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಕಣ್ಣು,ಕಿವಿ, ಮೂಗು ಇಲ್ಲದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.bjp-government-forgotten-work-flood-kpcc-ishwar-khandre

ಇನ್ನು ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಅತಿವೃಷ್ಠಿ, ಅನಾವೃಷ್ಟಿ ವೇಳೆ ತನ್ನ ಕೆಲಸ ಏನೆಂಬುದನ್ನ ಬಿಜೆಪಿ ಸರ್ಕಾರ ಮರೆತಿದೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರ ಹರಿಹಾಯ್ದರು.

Key words:  BJP government -forgotten -work –flood-kpcc-Ishwar Khandre.