ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನ ಅಧ್ಯಯನ ಹಿಂದಿಗಿಂತ ಇಂದು ಹೆಚ್ಚು ಅಗತ್ಯ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,15,2020(www.justkannada.in) : ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನ ಅಧ್ಯಯನವು ಹಿಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ವತಿಯಿಂದ ಆಯೋಜಿಸಿದ್ದ ‘’ರಾಷ್ಟ್ರೀಯ ವೆಬಿನಾರ್’’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.study-economics-sociology-more-necessary-today-ever-before-Chancellor Prof.G.Hemant Kumar

ಪ್ರಸ್ತುತ ದೇಶವು ಅನೇಕ ಸಮಸ್ಯೆಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ, ಅರ್ಥಶಾಸ್ತ್ರ ಅಧ್ಯಯನವು ದೇಶದ ಅಭಿವೃದ್ದಿಯ ದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಅರ್ಥಶಾಸ್ತ್ರದ ಅಭಿವೃದ್ಧಿ ಮಾದರಿಗಳನ್ನು ಯಾವ ರೀತಿಯಲ್ಲಿ ಜಾರಿಗೊಳಿಸಬೇಕು ಎಂಬುದು ಪ್ರಮುಖವಾಗಿದೆ ಎಂದರು.

ಮಾಲೀಕರ ಹಾಗೂ ಕಾರ್ಮಿಕರ ಹಿತಕಾಯುವಂತಹ ಆರ್ಥಿಕ ನೀತಿಗಳು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅರ್ಥಶಾಸ್ತ್ರದ ಅಧ್ಯಯನ ಸಾಗಬೇಕಿದ್ದು, ವಿದ್ಯಾರ್ಥಿಗಳನ್ನು ಈ ಮಾರ್ಗದಲ್ಲಿ ಸೂಕ್ತ ಸಲಹೆಗಳ ಮೂಲಕ ಸಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.study-economics-sociology-more-necessary-today-ever-before-Chancellor Prof.G.Hemant Kumar

ಸಮಾಜವಿಜ್ಞಾನ ಅಧ್ಯಯನವು ಅಗತ್ಯವಾಗಿದ್ದು, ಉನ್ನತ ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿಯಬೇಕಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವು ಸಹಕಾರಿಯಾಗಿದ್ದು, ಸೂಕ್ತ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬೇಕು. ಈ ಕುರಿತು ಚರ್ಚೆಗಳಾಗಬೇಕಿದೆ ಎಂದರು.

ತಂತ್ರಜ್ಞಾನವು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಹೇಗೆ ಪೂರಕ ಎಂಬುದನ್ನು ಅರಿಯಬೇಕು. ಸರಿಯಾದ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳನ್ನು ತಂತ್ರಜ್ಞಾನದ ಕಡೆಗೆ ಕರೆದೊಯ್ಯಬೇಕು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಈ ರೀತಿಯ ಚರ್ಚೆಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಮಾದೇಶ್ವರನ್ ಪರಿಸರ ಮಾಪನ ಮತ್ತು ಸಾಮಾಜಿಕ ವಿಜ್ಞಾನ ವಿಷಯ ಕುರಿತು ಹಾಗೂ  ಸಾಂಕ್ರಾಮಿಕ ಅವಧಿಯಲ್ಲಿ ಮತ್ತು ನಂತರದ ಉನ್ನತ ಶಿಕ್ಷಣ ಡೈನಾಮಿಕ್ಸ್ ವಿಷಯ ಕುರಿತು ಅರ್ಥಶಾಸ್ತ್ರದ ಮಾಜಿ ಪ್ರಾಧ್ಯಾಪಕ ಮತ್ತು ನಿರ್ದೇಶಕ ಪ್ರೊ.ವಸಂತ ರಾವ್ ಜುಗಲೆ ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ವಿ.ಗೋಪಾಲಪ್ಪ, ಪ್ರಾಧ್ಯಾಪಕರಾದ ಪ್ರೊ.ಎಂ.ಮಹೇಶ್, ಡಾ.ನವೀತಾ ತಿಮ್ಮಯ್ಯ, ಪ್ರೊ.ಎಸ್.ಇಂದುಮತಿ, ಪ್ರೊ.ಎಂ.ಮಹೇಶ್ ಇತರರು ಹಾಜರಿದ್ದರು.

key words : study-economics-sociology-more-necessary-today-ever-before-Chancellor Prof.G.Hemant Kumar