ಮಾಜಿ ಸಿಎಂ ಹೆಚ್.ಡಿಕೆ ಮತ್ತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ವಾಗ್ದಾಳಿ…..

ಹಾವೇರಿ,ಡಿ,2,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಹಿರೇ ಕೆರೂರು ಕ್ಷೇತ್ರದ ಬಿಜಪಿ ಅಭ್ಯರ್ಥಿ ಬಿ.ಸಿ ಪಾಟೀಲ್  ವಾಗ್ದಾಳಿ ನಡೆಸಿದ್ದಾರೆ.

ಹಿರೇಕೆರೂರಿನಲ್ಲಿ ಮಾತನಾಡಿರುವ ಬಿ.ಸಿ ಪಾಟೀಲ್, ಹಿರೇಕೆರೂರಿನಲ್ಲಿ ಡಿ.ಕೆ ಶಿವಕುಮಾರ್ ಮಾತು ನಡೆಯಲ್ಲ. ಡಿ.ಕೆ ಶಿವಕುಮಾರ್ ಹಿನ್ನೆಲೆ ಜನರಿಗೆ ಗೊತ್ತಿದೆ. ಡಿ.ಕೆ ಶಿವಕುಮಾರ್ ದರ್ಪದಲ್ಲೇ ಇರ್ತಾರೆ.  ಇನ್ನು ಹೆಚ್.ಡಿ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಅವರು ಗೌರವಕ್ಕೆ ತಕ್ಕಂತೆ ಮಾತನಾಡಲಿ. ಹೆಚ್.ಡಿ ಕೆ ಇತಿಹಾಸ ಸರಿ ಇದೆಯಾ ಎಂದು ಕಿಡಿಕಾರಿದರು.

ಹಾಗಯೇ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲ್, ಎರಡು ಪಕ್ಷದವರು ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ತಂತ್ರ ಉಪಚುನಾವಣೆಯಲ್ಲಿ ನಡೆಯಲ್ಲ ಎಂದು ಲೇವಡಿ ಮಾಡಿದರು.

Key words: BJP candidate -BC Patil- against -former CM –HD Kumaraswamy-  former minister -DK Sivakumar.