ಮೆಲ್ಬೋರ್ನ್ ಕನ್ನಡಿಗರಿಂದ ಸನ್ಮಾನ ಸ್ವೀಕರಿಸಿದ ಉಪ್ಪಿ ದಂಪತಿ !

ಬೆಂಗಳೂರು, ಡಿಸೆಂಬರ್ 02, 2019 (www.justkannada.in): ಮೆಲ್ಬೋರ್ನ್ ಕನ್ನಡ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿರುವ ಉಪೇಂದ್ರ ದಂಪತಿ ಕನ್ನಡಿಗರ ಗೌರವ ಸನ್ಮಾನ ಸ್ವೀಕರಿಸಿದ್ದಾರೆ.

ಹೌದು. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕ ಉಪೇಂದ್ರ ಸದ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಕುಟುಂಬ ಸಮೇತ ಉಪೇಂದ್ರ ಕಾಂಗಾರೂಗಳ ನಾಡಿಗೆ ತೆರಳಿ ಅಲ್ಲಿ ಕನ್ನಡಿಗರಿಂದ ಸನ್ಮಾನ ಸ್ವೀಕರಿಸಿದ್ದಾರೆ.

ಹೌದು. ಕಬ್ಜ ಸಿನಿಮಾ ಶೂಟಿಂಗ್ ಆರಂಭಕ್ಕೆ ಮೊದಲು ಉಪೇಂದ್ರ ಸಣ್ಣ ಬ್ರೇಕ್ ತೆಗೆದುಕೊಂಡಿದ್ದು, ಇದಾದ ಬಳಿಕ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.