ಮೋದಿ ಮೋದಿ ಎಂದು ಕೂಗಿದ ಯುವಕರಿಗೆ ತಿರುಪತಿ ನಾಮ ಹಾಕಿದ ಪ್ರಧಾನಿ

ಬೆಂಗಳೂರು, ಡಿಸೆಂಬರ್ 01, 2019 (www.justkannada.in): ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತ ದೇಶದ ಜಿಡಿಪಿ ಕುಸಿದಿದೆ. ಮೋದಿಯಂತಹ ಪ್ರಧಾನಿ ಬೇಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೆಆರ್ ಪುರಂನಲ್ಲಿ ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯುವಕರು ಮೋದಿ ಮೋದಿ ಎಂದು ಹೇಳುತ್ತಿದ್ದರು. ಯುವಕರಿಗೆ ಮೋದಿ ತಿರುಪತಿ ನಾಮ ಹಾಕಿದ್ದಾರೆ. ಪ್ರಜಾಪ್ರಭುತ್ವಕ್ಕೆ ಈ ಸರ್ಕಾರ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.