15 ಕ್ಷೇತ್ರಗಳಲ್ಲೂ ಬಿಜೆಪಿ ಪರ ಅಲೆ, ಗೆಲುವು ಖಚಿತ: ಫೆಬ್ರವರಿಯಲ್ಲಿ ರೈತರ ಪರ ಹೊಸ ಬಜೆಟ್ -ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

ಹುಬ್ಬಳ್ಳಿ, ಡಿ,3,2019(www.justkannada.in):  ರಾಜ್ಯದಲ್ಲಿ ಸ್ಥಿರ ಸರ್ಕಾರ ಮಾಡಲು ಯೋಜನೆ ರೂಪಿಸಿದ್ದೇನೆ. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆ ಇದೆ. ಹೀಗಾಗಿ ಬಿಜೆಪಿ ಗೆಲವು ಸಾಧಿಸುವುದು ಖಚಿತ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನಬೆಂಬಲ ಇದೆ.  ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದು ಸ್ಥಿರ ಸರ್ಕಾರ ನೀಡುತ್ತೇವೆ. ಫೆಬ್ರವರಿಯಲ್ಲಿ ರೈತರಿಗೆ ಹೊಸ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಆದ್ರೆ ಯಾವ ಕ್ಷೇತ್ರದಲ್ಲೂ ಅವರ ಪರವಾದ ವಾತಾವರಣ ಇಲ್ಲ. ಡಿಸೆಂಬರ್ 9 ರಂದು ರಾಜ್ಯದಲ್ಲಿ ಏನಾಗುತ್ತೆ ನೀವೇ ನೋಡುತ್ತಾ ಇರಿ. ಅಲ್ಲಿವರೆಗೆ ಕಾಂಗ್ರೆಸ್ ಜೆಡಿಎಸ್  ಸುಮ್ಮನಿರಿ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: BJP – -15 constituencies-Farmers- New Budget  – CM BS Yeddyurappa.