ಹೆಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ: ಜೆಡಿಎಸ್ –ಕಾಂಗ್ರೆಸ್ ಮತ್ತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಏನಂದ್ರು ಗೊತ್ತೆ…?

ಹುಣಸೂರು,ಡಿ,3,2019(www.justkannada.in):  ಜೆಡಿಎಸ್ ಜತೆ ಕಾಂಗ್ರೆಸ್ ಜತೆ ಮತ್ತೆ ಮೈತ್ರಿ ಬಗ್ಗೆ ಸದ್ಯ ಮಾತುಕತೆ ಆಗಿಲ್ಲ. ಸಮಯ ಬಂದಾಗ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

ಹುಣಸೂರು ಉಪಚುನಾವಣಾ ಕಣ ರಂಗೇರಿದ್ದು ಇಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಪರ ಸಿದ್ಧರಾಮಯ್ಯ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ಮಾರಾಟವಾಗಿದ್ದಾರೆ.  ನಿಮಗೆ ಮೋಸ ಮಾಡಿದ್ದಾರೆ.  ರಾಜೀನಾಮೆ ಕೊಡುವಾಗ ನಿಮಗೆ ಹೇಳಿದ್ರಾ..? ಸುಪ್ರೀಂಕೋರ್ಟ್ ಅವರನ್ನ ಅನರ್ಹರು ಎಂದು ಹೇಳಿದೆ. ನೀವು ಅವರನ್ನ ಅನರ್ಹರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಹೆಚ್.ವಿಶ್ವನಾಥ್ ಸುಳ್ಳುಗಾರ ಶಾಸಕನಾಗಲು ಅವರು ಅರ್ಹರಲ್ಲ…

ಹಾಗೆಯೇ ತಮ್ಮನ್ನ ಹೆಚ್.ವಿಶ್ವನಾಥ್ ಹೊಗಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಚುನಾವಣಾ ತಂತ್ರದಿಂದ ಈ ರೀತಿ ಹೇಳಿದ್ದಾರೆ. ನನ್ನನ್ನ ಬೈದರೇ ಜನ ಮತ ಹಾಕಲ್ಲ ಅಂತಾ ನನ್ನನ್ನ ಹೊಗಳಿದ್ದಾರೆ. ಹೆಚ್.ವಿಶ್ವನಾಥ್ ಸುಳ್ಳುಗಾರ ಶಾಸಕನಾಗಲು ಅವರು ಅರ್ಹರಲ್ಲ. ತಮ್ಮ ಸ್ವಾಭಿಮಾನವನ್ನ ಮಾರಿಕೊಂಡು ಆ ಕಡೆ ಹೋಗಿದ್ದಾರೆ. ಕಾಂಗ್ರೆಸ್ ನಲ್ಲಿ 35 ವರ್ಷ ಇದ್ದು ಅಧಿಕಾರ ಅನುಭವಿಸಿದ್ದರು. ಕಾಂಗ್ರೆಸ್ ನನ್ನ ತಾಯಿ ರೋಮಾಂಚನವಾಗುತ್ತೆ ಎಂದಿದ್ದರು. ಅನರ್ಹರಾಗಿರುವ ಅವರನ್ನ ಕಡ್ಡಾಯವಾಗಿಯೇ ಅನರ್ಹರನ್ನಾಗಿ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯನೋ ಮಂಜುನಾಥ್ ಗೆಲ್ಲೋದು ಅಷ್ಟೇ ಸತ್ಯ…

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಿದ್ಧರಾಮಯ್ಯ, ಮಂಜುನಾಥ್ ರನ್ನ ಗೆಲ್ಲಿಸಿ. ಮಂಜುನಾಥ್ ಗೆದ್ದರೇ ನಾನು ಗೆದ್ದಂತೆ.  ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯನೋ ಮಂಜುನಾಥ್ ಗೆಲ್ಲೋದು ಅಷ್ಟೇ ಸತ್ಯ. ಜೆಡಿಎಸ್ ಗೆಲ್ಲಲ್ಲ ಹೀಗಾಗಿ ಜೆಡಿಎಸ್ ನವರು ಕಾಂಗ್ರೆಸ್ ಗೆ ವೋಟ್ ಹಾಕಿ ಎಂದು ಹೇಳಿದರು.

Key words: hunsur-by-election-siddaramaiah- outrage-against-bjp candidate-h.vishwanath