ಹ್ಯಾಟ್ರಿಕ್ ಹೀರೊಶಿವಣ್ಣಗೆ ಇಂದು ಜನ್ಮ ದಿನದ ಸಂಭ್ರಮ

ಬೆಂಗಳೂರು, ಜುಲೈ 12, 2021 (www.justkannada.in):

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.

ಹುಟ್ಟುಹಬ್ಬಕ್ಕಿಂತಲೂ ಆರೋಗ್ಯ ಮುಖ್ಯ ಯಾರೂ ಸಹ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ಈ ಮೊದಲೇ ಶಿವಣ್ಣ ಹೇಳಿದ್ದರು.

ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭ ಇಂದು ಶಿವರಾಜ್ ಕುಮಾರ್ ಅಭಿನಯದ ಹಲವು ಸಿನಿಮಾಗಳ ಹೆಸರು ಘೋಷಣೆ, ಟೀಸರ್ ಬಿಡುಗಡೆ ಆಗಲಿದೆ.

ರಿಷಬ್ ಶೆಟ್ಟಿ, ಶಿವಣ್ಣನಿಗಾಗಿ ನಿರ್ದೇಶಿಸಲಿರುವ ಹೊಸ ಸಿನಿಮಾದ ಟೈಟಲ್ ಸಹ ಇಂದೇ ಘೋಷಣೆ ಆಗಲಿದೆ.