ಶಾಲೆ ಆರಂಭ ಸಂಬಂಧ ಕಾರ್ಯಪಡೆ ರಚನೆ.

ಬೆಂಗಳೂರು,ಜುಲೈ,12,2021(www.justkannada.in): ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವ ಹಿನ್ನೆಲೆ ಶಾಲೆ-ಕಾಲೇಜುಗಳ ಆರಂಭವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಶಾಲೆ ಆರಂಭ ಸಂಬಂಧ ಕೋವಿಡ್ ಕಾರ್ಯಪಡೆ ರಚನೆ ಮಾಡಲಾಗಿದೆ.jk

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು, ಅಧಿಕಾರಿಗಳನ್ನೊಳಗೊಂಡ ತಂಡ ಇದಾಗಿದೆ.  ಶೈಕ್ಷಣಿಕ ವರ್ಷ, ಶಾಲೆ ಆರಂಭ ಹೇಗೆ. ವಿದ್ಯಾಗಮ ಬಗ್ಗೆ ಮಾಹಿತಿ ಸಂಗ್ರಹ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸ್, ಪರ್ಯಾಯ ಶಿಕ್ಷಣದ ಬಗ್ಗೆ ಕಾರ್ಯಪಡೆ ಶಿಕ್ಷಣ ಸಚಿವರಿಗೆ ವರದಿ ನೀಡಲಿದೆ.

ನಂತರ ವರದಿ ಪರಿಶೀಲಿಸಿ ಶಾಲಾ;ಕಾಲೇಜು ಆರಂಭದ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

Key words: Structure – task force – school -Reopen