‘ಪಬ್ಲಿಕ್’ ಆಗಿ ಪರೋಕ್ಷ ‘ಪಂಚ್’ ಕೊಟ್ಟ ರಕ್ಷಿತ್ ಶೆಟ್ಟಿ!

ಬೆಂಗಳೂರು, ಜುಲೈ 12, 2021 (www.justkannada.in): ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಕ್ಷಿತ್ ‘ರಿಚರ್ಡ್ ಆಂಟನಿ’ ಸಿನಿಮಾಗೆ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಬಗ್ಗೆ ನಿನ್ನೆ ಘೋಷಣೆಯಾಗಿದೆ.

ವಿಷಯ ಸಿನಿಮಾ ಘೋಷಣೆಯದ್ದಲ್ಲ. ಅವರು ಖಾಸಗಿ ವಾಹಿನಿಗೆ ಕೊಟ್ಟಿರುವ ಪರೋಕ್ಷ ಟಾಂಗ್!

ನಮ್ಮ ವಿರುದ್ಧ ಮಾತನಾಡುವವರಿಗೆ ಕೆಲಸದ ಮೂಲಕ ಉತ್ತರ ಕೊಡೊಣ ಎಂದಿದ್ದಾರೆ ರಕ್ಷಿತ್. ಇನ್ನು ಟೈಟಲ್ ನೋಡಿದ ಅಭಿಮಾನಿಗಳಿಗೆ ಇದು ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗ ಎಂಬುದು ಪಕ್ಕಾ ಆಗಿದೆ.

ಜತೆಗೆ ಎಲ್ಲಿ ಆರಂಭ ಮಾಡಿದ್ದೆನೋ ಮತ್ತೆ ಅಲ್ಲಿಂದಲೇ ಶುರು ಮಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ಇತ್ತೀಚಿಗೆ ಕನ್ನಡ ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಬಗ್ಗೆ ಮಾಡಿದ ಆರೋಪಗಳಿಗೆ ರಕ್ಷಿತ್ ಇಂದು ಪ್ರತಿಕ್ರಿಯೆ ನೀಡಿದರು. ಜತೆಗೆ 11ಕ್ಕೆ ಉತ್ತರ ಕೊಡುತ್ತೇನೆ ಎಂದು ಪೋಸ್ಟ್ ಮಾಡಿದ್ದರು.