Saturday, August 22, 2026

BDA Apartments

Home Cinema ‘ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ’ ಹೆಸರಲ್ಲಿ ಸಿನಿಮಾ! ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದವನ ‘ಬಯೋಗ್ರಫಿ’...

‘ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ’ ಹೆಸರಲ್ಲಿ ಸಿನಿಮಾ! ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದವನ ‘ಬಯೋಗ್ರಫಿ’ ತೆರೆ ಮೇಲೆ!

ಬೆಂಗಳೂರು, ಜನವರಿ 2, 2019 (www.justkannada.in): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ, ಪೊಲೀಸರಿಗೆ ಶರಣಾದ ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ!

‘ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ’ ಎಂಬ ಶೀರ್ಷಿಕೆಯನ್ನು ತುಳಸಿ ರಾಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ನೋಂದಣಿ ಮಾಡಿಸಿದ್ದಾರೆ.

‘ಈ ಚಿತ್ರದ ಚಿತ್ರೀಕರಣವು ಇನ್ನು ಎರಡರಿಂದ ಮೂರು ತಿಂಗಳಲ್ಲಿ ಆರಂಭವಾಗುತ್ತದೆ. ಬಿ.ಆರ್. ಕೇಶವ್ ಚಿತ್ರದ ನಿರ್ದೇಶನ ಮಾಡಲಿದ್ದಾರೆ’ ಎಂದು ತುಳಸಿ ಅವರು ತಿಳಿಸಿದ್ದಾರೆ.