BIG EXCLUSIVE : ಮೈಸೂರು ಅರಮನೆಗೂ ಕಾಲಿಟ್ಟ ಕರೋನಾ : 3 ದಿನ ಪ್ರವೇಶ ನಿಷೇಧ.

 

ಮೈಸೂರು, ಜು.09, 2020 : (www.justkannada.in news) : ವಿಶ್ವವಿಖ್ಯಾತ ಮೈಸೂರು ಅರಮನೆ ನಾಳೆಯಿಂದ ಮೂರು ದಿನಗಳ ಕಾಲ ಬಂದ್. ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ.

ಅರಮನೆಯ ಬ್ರಹ್ಮಪುರಿ ದ್ವಾರದ ಬಳಿ ಇರುವ ಕುದುರೆಮಾಳದ ಸಮೀಪ ಅರಮನೆ ಒಂಟೆಗಳಿಗೆ ಜಾಗ ನೀಡಲಾಗಿತ್ತು. ಜತೆಗೆ ಇವುಗಳನ್ನು ನಿರ್ವಹಣೆ ಮಾಡುವ ಸಿಬ್ಬಂದಿಗೂ ಅಲ್ಲೇ ಕ್ವಾಟರ್ಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಒಂಟೆಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮಗನಿಗೆ ಕೋವಿಡ್ 19 ದೃಢಪಟ್ಟಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಮಣ್ಯ ಅವರು ‘ ಜಸ್ಟ್ ಕನ್ನಡ ಡಾಟ್ ಇನ್ ‘ ಗೆ ತಿಳಿಸಿದರು.

covid-19-confirmed-at-Mysore-palace-camel-caretaker-DD-palace.board-T.S.Subramanya.
ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ.

ಈ ಹಿನ್ನೆಲೆಯಲ್ಲಿ ಅರಮನೆ ಹಾಗೂ ಆವರಣವನ್ನು ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕಾಗಿ ನಾಳೆ ಅಂದ್ರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಪ್ರವಾಸಿಗರಿಗೆ ನಿರ್ಬಂಧವಿರುತ್ತದೆ. ಈಗಾಗಲೇ ಭಾನುವಾರ ಲಾಕ್ ಡೌನ್ ಇರುವ ಕಾರಣ ಶುಕ್ರವಾರ ಮತ್ತು ಶನಿವಾರ ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಮಣ್ಯ ತಿಳಿಸಿದರು.

covid-19-confirmed-at-Mysore-palace-camel-caretaker-DD-palace.board-T.S.Subramanya.

ooo

key words : covid-19-confirmed-at-Mysore-palace-camel-caretaker-DD-palace.board-T.S.Subramanya.