Saturday, September 26, 2026

BDA Apartments

ಬಿಡದಿ ಟೌನ್ ಶಿಪ್: HDK ಮತ್ತು ಸಿಎಂ ಡಿಕೆಶಿ ನಡುವೆ ಬಹಿರಂಗ ಚರ್ಚೆಗೆ ವೇದಿಕೆ ಸಿ...
Home Front Page ಬಿಡದಿ ಟೌನ್ ಶಿಪ್: HDK ಮತ್ತು ಸಿಎಂ ಡಿಕೆಶಿ ನಡುವೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದ

ಬಿಡದಿ ಟೌನ್ ಶಿಪ್: HDK ಮತ್ತು ಸಿಎಂ ಡಿಕೆಶಿ ನಡುವೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದ

ರಾಮನಗರ,ಜೂನ್,27,2026 (www.justkannada.in):  ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿಎಂ ಡಿಕೆ ಶಿವಕುಮಾರ್ ನಡುವಿನ ಸಮರ ಮುಂದುವರೆದಿದ್ದು ಬಹಿರಂಗ ಚರ್ಚೆಗೆ ವೇದಿಕೆಗೆ  ಸಿದ್ದವಾಗಿದೆ.

ಬಿಡದಿಯ  ಬೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದಪಡಿಸಲಾಗಿದ್ದು,  ವೇದಿಕೆಯ ಮೇಲಿನ ಮುಂಭಾಗದಲ್ಲಿ ಎರಡು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಆಸನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಂದು ಆಸನ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮೀಸಲಿರಿಸಲಾಗಿದೆ.  ಜೆಡಿಎಸ್ ಕಾರ್ಯಕರ್ತರು ಕುರ್ಚಿ ಮುಂಭಾಗ ನೇಮ್ ಬೋರ್ಡ್ ಇಟ್ಟಿದ್ದಾರೆ. ಕುರ್ಚಿ ಮೇಲೆ ಇಬ್ಬರು ನಾಯಕರ ಹೆಸರು ಅಂಟಿಸಿ ವೇದಿಕೆಯನ್ನ ಸಿದ್ದಪಡಿಸಲಾಗಿದೆ.ಬಿಡದಿ ಟೌನ್ ಶಿಪ್ bidadi

ಬಿಡದಿ ಟೌನ್ ಶಿಪ್ ಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಈ ಬಗ್ಗೆ ರೈತರ ಸಮ್ಮುಖದಲ್ಲೇ ಬೈರಮಂಗಲದಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಸಿಎಂ ಡಿಕೆ ಶಿವಕುಮಾರ್ ಗೆ ಬಹಿರಂಗ ಸವಾಲು ಹಾಕಿದ್ದಾರೆ. ಹಾಗೆಯೇ ಸಿಎಂ ಡಿಕೆ ಶಿವಕುಮಾರ್ ವಿಧಾನಸೌಧದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದರು. ಹೀಗಾಗಿ ಬಹಿರಂಗ ಚರ್ಚೆಗೆ ಸಿಎಂ ಡಿಕೆ ಶಿವಕುಮಾರ್ ಬರುತ್ತಾರೆಯೇ ಇಲ್ಲವೇ? ಎಂಬುದನ್ನ ಕಾದು ನೋಡಬೇಕಿದೆ.HDK ಮತ್ತು ಸಿಎಂ ಡಿಕೆಶಿ ನಡುವೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದ jk02_new jk02 new

Key words: Bidadi Township,  open debate, between, HDK , CM DK Shivakumar