Monday, September 21, 2026

BDA Apartments

ಬಿಡದಿ ಟೌನ್ ಶಿಪ್ ಗೆ ವಿರೋಧ: ರೈತರಿಂದ ಪ್ರತಿಭಟನೆ, ರ್ಯಾಲಿ BDA JK_Adv BDA Adv
Home Front Page ಬಿಡದಿ ಟೌನ್ ಶಿಪ್ ಗೆ ವಿರೋಧ: ರೈತರಿಂದ ಪ್ರತಿಭಟನೆ, ರ್ಯಾಲಿ.

ಬಿಡದಿ ಟೌನ್ ಶಿಪ್ ಗೆ ವಿರೋಧ: ರೈತರಿಂದ ಪ್ರತಿಭಟನೆ, ರ್ಯಾಲಿ.

ರಾಮನಗರ,ಜೂನ್,22,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ರೈತರು ಸಿಡಿದೆದ್ದಿದ್ದು ಇಂದು ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯರೈತ ಸಂಘದ ವತಿಯಿಂದ  ರೈತರು ಬಿಡದಿಯಿಂದ ಭೈರಮಂಗಲದವರೆಗೂ ಬೃಹತ್ ರ್ಯಾಲಿ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.  ಬಿಡದಿ ಪಟ್ಟಣದ ರಸ್ತೆಯಲ್ಲಿ ಕುಳಿತು ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ.ಬಿಡದಿ ಟೌನ್ ಶಿಪ್ ಗೆ ವಿರೋಧ rally1

ಬಿಡದಿ ಭಾಗದ ರೈತರಿಗೆ ಹಲವು ಭಾಗದ ರೈತರು ಸಹ ಬೆಂಬಲ ನೀಡಿದ್ದು ರೈತರ ಭೂಮಿ ಸ್ವಾಧೀನಪಡಿಸಿಕೊಂಡು  ಟೌನ್ ಶಿಪ್ ನಿರ್ಮಾಣ ಬೇಡ ಎಂದು ಪಟ್ಟು ಹಿಡಿದಿದ್ದಾರೆ.ರೈತರಿಂದ ಪ್ರತಿಭಟನೆ jk02_new jk02 new

Key words: Bidadi, township, farmer, protest