Saturday, August 15, 2026

BDA Apartments

Home Front Page ದ್ರೋಹ ಆಗಿದ್ರೆ ಸತ್ಯಶೋಧನೆ ಕಮಿಟಿ ರಚಿಸಬೇಕು –ಹೆಚ್.ಡಿಕೆಗೆ ಹೇಳಿಕೆ ಬಗ್ಗೆ  ಸತೀಶ್ ಜಾರಕಿಹೊಳಿ ವ್ಯಂಗ್ಯ..

ದ್ರೋಹ ಆಗಿದ್ರೆ ಸತ್ಯಶೋಧನೆ ಕಮಿಟಿ ರಚಿಸಬೇಕು –ಹೆಚ್.ಡಿಕೆಗೆ ಹೇಳಿಕೆ ಬಗ್ಗೆ  ಸತೀಶ್ ಜಾರಕಿಹೊಳಿ ವ್ಯಂಗ್ಯ..

ಬೆಳಗಾವಿ,ಡಿಸೆಂಬರ್,5,2020(www.justkannada.in):   ಕಾಂಗ್ರೆಸ್ ಜತೆ ಕೈ ಜೋಡಿಸಿ ಹಾಳಾದೆ. ಕಾಂಗ್ರೆಸ್ ನಿಂದ ದ್ರೋಹವಾಗಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಘ್ ನೀಡಿದ್ದಾರೆ.

 ಕಾಂಗ್ರೆಸ್ ನಿಂದ ದ್ರೋಹ ಆಗಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಮುಗಿದ ಅಧ್ಯಾಯ.  ದ್ರೋಹವಾಗಿದ್ದರೇ ಸತ್ಯಶೋಧನೆ ಕಮಿಟಿ ರಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ  ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ದ್ರೋಹ ಆಗಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಮುಗಿದ ಅಧ್ಯಾಯವಾಗಿದೆ.  ಜೆಡಿಎಸ್, ಬಿಜೆಪಿ ಎಂಬ ಪ್ರಶ್ನೆಯಿಲ್ಲ, ಎಲ್ಲವೂ ಮುಗಿದು ಹೋಗಿದೆ. ಬೇರೆ ಬೇರೆ ಕಾರಣಗಳಿಂದ ಮುಗಿದು ಹೋಗಿದೆ, ಚರ್ಚೆ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ನಿಂದ ದ್ರೋಹ ಆಗಿದೆ ಎನ್ನುವುದಕ್ಕೆ ಸತ್ಯಶೋಧನೆ ಕಮಿಟಿ ರಚಿಸಬೇಕು ಎಂದು ಟಾಂಗ್ ನೀಡಿದರು.Betrayal Truth Committee- formed- Satish jarakiholli - about –HDK- statement

ಸಿದ್ದರಾಮಯ್ಯ ಅಂಡ್ ಟೀಂ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಷ್ಟು ನಾವಿಲ್ಲ. ಅವರ ಮಟ್ಟದಲ್ಲಿ ಅದಕ್ಕೆ ನಮ್ಮವರು ಮಾತನಾಡುತ್ತಾರೆ ಎಂದರು.

Key words:  Betrayal Truth Committee- formed- Satish jarakiholli – about –HDK- statement