ಅಂಗನವಾಡಿ, ಶಾಲೆಗೆ ಮಕ್ಕಳ ನೋಂದಾಣಿಸಲು ಮನೆ,ಮನೆ ಸಮೀಕ್ಷೆ : ಸರಕಾರದಿಂದ ಗ್ರಾಪಂಗೆ ಸುತ್ತೋಲೆ

ಮೈಸೂರು,ಡಿಸೆಂಬರ್,05,2020(www.justkannada.in) : ಮನೆ,ಮನೆ ಸಮೀಕ್ಷೆ ಕೈಗೊಂಡು 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆ ಮಕ್ಕಳನ್ನು ಅಂಗನವಾಡಿ, ಶಾಲೆಗೆ ನೋಂದಣಿ ಮಾಡುವಂತೆ ಗ್ರಾಪಂ ಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿದೆ.

logo-justkannada-mysore

ಸಂವಿಧಾನವು ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಉಲ್ಲೇಖ(1)ರ ಸುತ್ತೋಲೆ ಮತ್ತು ಉಲ್ಲೇಖ(2)ರ ಸರ್ಕಾರದ ಪತ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸ್ಥಳೀಯ ಸರ್ಕಾರಗಳು ಕೈಗೊಳ್ಳಬೇಕಾದ ಕಾರ್ಯಕ್ರಮದ ಮಾರ್ಗಸೂಚಿಗಳ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.

anganwadi,donate,children,school,Home,Home,Survey,Circular,Government,Grapham

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು the Karnataka right of children to free and compulsory education rules 2012ರನ್ವಯ ಗ್ರಾಮಪಂಚಾಯಿತಿಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಬೇಕಾಗಿರುತ್ತದೆ.  ಈ ಬಗ್ಗೆ ಉಲ್ಲೇಖ(1)ರ ಸುತ್ತೋಲೆಯಲ್ಲಿ ಎಲ್ಲಾ ಗ್ರಾಪಂ ಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಲು ತಿಳಿಸಲಾಗಿದೆ.

ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆಯು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.

anganwadi-donate-children-school-Home-Home-Survey-Circular-Government-Grapham

key words : anganwadi-donate-children-school-Home-Home-Survey-Circular-Government-Grapham