ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ…!

ಬೆಂಗಳೂರು,ಡಿಸೆಂಬರ್,27,2020(www.justkannada.in) : ಮುಂಜಾನೆಯೇ ಬೆಂಗಳೂರಿನ ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ.Teachers,solve,problems,Government,bound,Minister,R.Ashok

ಐದು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ. ಏರ್​ಪೋರ್ಟ್​ ರಸ್ತೆಯಲ್ಲಿ ಬಂದ ಸ್ವಿಫ್ಟ್​​​ ಕಾರು ಡಿವೈಡರ್​ ಹಾರಿ ಏರ್​​ಪೋರ್ಟ್​​ ಕಡೆ ಹೊರಟಿದ್ದ ನಿಸಾನ್​​​ ಕಾರಿಗೆ ಡಿಕ್ಕಿ ಹೊಡೆದಿದೆ. ಜೊತೆಗೆ ಇಂಡಿಕಾ ಅಲ್ಟೋ ಸೇರಿ ಮೂರು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ. ಜೊತೆಗೆ ಇಂಡಿಕಾ ಕಾರು ಚಾಲಕನೂ ಸಹ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಟ್ರಾಫಿಕ್​ ಪೊಲೀಸರು ಆಗಮಿಸಿದ್ದು, ಏರ್ಪೋರ್ಟ್ ರಸ್ತೆ ಬ್ಯಾಟರಾಯನಪುರ ಫ್ಲೈಓವರ್ ಮೇಲೆ ಈ ಅಪಘಾತ ನಡೆದಿದೆ. ಹೀಗಾಗಿ, ಏರ್​​ಪೋರ್ಟ್​​​ ಕಡೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

Bengaluru,airport,road,accident

ಅಪಘಾತದಲ್ಲಿ ಒಟ್ಟು 9 ಜನರಿಗೆ ಗಾಯಗಳಾಗಿವೆ. ಪೊಲೀಸರು ಅಪಘಾತದಲ್ಲಿ ಜಖಂಗೊಂಡ ಕಾರುಗಳ ತೆರವು ಮಾಡಿ, ಟ್ರಾಫಿಕ್​ ಕ್ಲಿಯರ್ ಮಾಡಲು ಹರಸಾಹಸ ಪಟ್ಟರು. ಐದು ಕಾರುಗಳಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

key words : Bengaluru-airport-road-accident