Tuesday, September 15, 2026

BDA Apartments

ನೂರು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ವ್ಯಾಕ್ಸಿನ್ ತಯಾರಿಕೆ ಕೇಂದ್ರ..! BDA JK_Adv ...
Home Front Page ನೂರು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ವ್ಯಾಕ್ಸಿನ್ ತಯಾರಿಕೆ ಕೇಂದ್ರ..!

ನೂರು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ವ್ಯಾಕ್ಸಿನ್ ತಯಾರಿಕೆ ಕೇಂದ್ರ..!

belgavi-vaccine-making-center-a-hundred-years-ago

ಬೆಂಗಳೂರು, ಜನವರಿ 17, 2022 (www.justkannada.in): ನೂರು ವರ್ಷಗಳ ಹಿಂದೆಯೇ ಬೆಳಗಾವಿಯೇ ವ್ಯಾಕ್ಸಿನ್ ಒಂದರ ತಯಾರಿಕೆಯ ಕೇಂದ್ರ ಬಿಂದುವಾಗಿತ್ತು! ಇಡೀ ದೇಶಕ್ಕಲ್ಲದೇ ನೆರೆಹೊರೆಯ ದೇಶಗಳಿಗೂ ಇಲ್ಲಿಂದಲೇ ಹೋಗುತ್ತಿತ್ತು!

ಕೊರೋನಾ ಹೆಮ್ಮಾರಿಗೆ ವಿಶ್ವದ ಅನೇಕ ದೇಶಗಳು ಹಲವಾರು ಲಸಿಕೆಗಳನ್ನು ಕಂಡು ಹಿಡಿಯುತ್ತಿವೆ.ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ.ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆಯೇ ಇಂಥ ಲಸಿಕೆಯೊಂದು ತಯಾರಾಗುತ್ತಿತ್ತೆಂದರೆ ನಿಮಗೆ ಅಚ್ಚರಿ ಆಗಬಹುದು.
ಬೆಳಗಾವಿಯಲ್ಲಿ ಕಳೆದ ಒಂದು ನೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ವ್ಯಾಕ್ಸಿನ್ ಡಿಪೊ ಹೆಸರಿನ ಅತ್ಯಂತ ಹಳೆಯ ಕಟ್ಟಡದಲ್ಲಿ 1909 ರಿಂದಲೇ ಇಂಥ ಅಪರೂಪದ ಲಸಿಕೆಯೊಂದು ಸಿದ್ಧವಾಗುತ್ತಿತ್ತು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಜಾನುವಾರುಗಳಿಗೆ ಬರುತ್ತಿದ್ದ ಸಿಡುಬು ರೋಗದ ಚಿಕಿತ್ಸೆಗಾಗಿ ಲಸಿಕೆಯೊಂದನ್ನು ಕಂಡು ಹಿಡಿದದ್ದು…ನೂರು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ವ್ಯಾಕ್ಸಿನ್ ತಯಾರಿಕೆ ಕೇಂದ್ರ..! belgaum Vac...

1904 ರಲ್ಲಿ ಕ್ಯಾಪ್ಟನ್ ಹುಚಿನ್ಸನ್ ಎಂಬ ಬ್ರಿಟಿಶ್ ಅಧಿಕಾರಿ ಬೆಳಗಾವಿಯಲ್ಲಿ ಲಸಿಕೆ ತಯಾರಿಕಾ ಕೇಂದ್ರ ಆರಂಭಿಸಿದ.1909 ರಲ್ಲಿ ಇದಕ್ಕಾಗಿಯೇ ಒಂದು ಕಟ್ಟಡ ಕಟ್ಟಲಾಯಿತು.ಆ ಹಳೆಯ ಕಲ್ಲಿನ ಕಟ್ಟಡವೇ ಈಗಲೂ ಬೆಳಗಾವಿಯ ಟಿಳಕವಾಡಿಯ ಮೊದಲ ರೈಲು ಗೇಟ್ ಸಮೀಪದಲ್ಲಿದೆ.
ಈ ಕಟ್ಟಡದಲ್ಲಿಯೇ ಕೆಲವು ಆರೋಗ್ಯ ಇಲಾಖೆಯ ಕಚೇರಿಗಳಿವೆ.ಲಸಿಕೆ ತಯಾರಿಕೆಗಾಗಿ ಆರಂಭದಲ್ಲಿ ಆಕಳು ಕರುಗಳನ್ನು ವಧೆ ಮಾಡಲಾಗುತ್ತಿತ್ತು.ಅವುಗಳ ತಲೆಗಳಲ್ಲಿಯ ಕೆಲವು ಮಾಂಸವನ್ನು ತೆಗೆದುಕೊಳಲಾಗುತ್ತಿತ್ತು.ನಂತರ ಕುರಿಗಳನ್ನು ಬಳಸಿಕೊಳ್ಳಲಾಯಿತು.ಮತ್ತೆ ಎಮ್ಮೆ ಕರುಗಳನ್ನೂ ವಧಿಸಲಾಯಿತು.

1956 ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬರುವವರೆಗೂ ಮುಂಬಯಿ ಪ್ರಾಂತದಲ್ಲಿಯೇ ಇದ್ದ ಬೆಳಗಾವಿಯಲ್ಲಿ ತಯಾರಾದ ಸಿಡುಬು ರೋಗದ ಲಸಿಕೆಯು ಇಡೀ ದೇಶಕ್ಕಲ್ಲದೇ ನೆರೆಹೊರೆಯ ದೇಶಗಳಿಗೂ ಪೂರೈಸಲ್ಪಡುತ್ತಿತ್ತು. ಸದ್ಯ ಲಸಿಕೆಯನ್ನು ಸಂಗ್ರಹಿಸಿಡಲು ಶೈತ್ಯಾಗಾರಗಳನ್ನು ಬಳಸಲಾಗುತ್ತಿದೆ.ನಿರ್ಧಿಷ್ಟ ತಾಪಮಾನದಲ್ಲಿಯೇ ಲಸಿಕೆಯನ್ನು ಇರಿಸಲಾಗುತ್ತಿದೆ.ಆದರೆ 19 ನೇ ಶತಮಾನದ ಆರಂಭದಲ್ಲಿ ಈಗಿನಂತೆ ತಂತ್ರಙ್ಞಾನ ಇರಲಿಲ್ಲ.ಸದ್ಯ ಇರುವ ವ್ಯಾಕ್ಸಿನ್ ಡಿಪೊದ ಪರಿಸರದಲ್ಲಿಯ ಕಟ್ಟಡಗಳೇ ನಿಸರ್ಗದತ್ತ ತಂಪು ವಾತಾವರಣ ಹೊಂದಿದ್ದವು.ಅಲ್ಲಿಯೇ ಶೇಖರಿಡಲಾಗುತ್ತಿತ್ತು.ರಗಳನ belgaum Vaccine making center a hundred years ago! 1d9ef3d9 bd04 4ee6 bf4a f19a354d1f05

1977 ರವರೆಗೆ ಸಿಡುಬು ರೋಗವು ಸಂಪೂರ್ಣವಾಗಿ ನಿವಾರಣೆಯಾಯಿತು.ನಂತರ ಇಲ್ಲಿ ನಾಯಿ
ಕಡಿತಕ್ಕೆ ನೀಡಲಾಗುವ ರೇಬಿಸ್ ಲಸಿಕೆ ತಯಾರಿಕೆ ಆರಂಭವಾಯಿತು.ಅನೇಕ ವರ್ಷಗಳ ಕಾಲ ಈ ಲಸಿಕೆ ತಯಾರಾಗುತ್ತಿತ್ತು.ಕ್ರಮೇಣ ಅದೂ ಸಹ ನಿಂತು ಹೋಯಿತು. ಈ ಡಿಪೊ ಕಟ್ಟಡದಲ್ಲಿ ಕುರಿ, ಎಮ್ಮೆ ಕರು ಮತ್ತು ಆಕಳು ಕರುಗಳನ್ನು ವಧಿಸುತ್ತಿದ್ದ ” ವಧೆ ಉಗ್ರಾಣಗಳು” ಇನ್ನೂ ಇವೆ.1909 ರಲ್ಲಿ ಇಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ಹೆಸರುಗಳುಳ್ಳ ಫಲಕವೂ ಇದೆ.

ಸದ್ಯ ಕೊರೋನಾ ಲಸಿಕೆಯನ್ನೂ ಸಹ ಇದೇ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. 156 ಎಕರೆ ಪ್ರದೇಶ ಹೊಂದಿರುವ ವ್ಯಾಕ್ಸಿನ್ ಡಿಪೊದಲ್ಲಿ ಸಾವಿರಾರು ಗಿಡಮೂಲಿಕೆಯ ಗಿಡಮರಗಳೂ ಇವೆ.ಅಲ್ಲಿ ಪ್ರವೇಶಿಸಿದರೆ ನಿಸರ್ಗದ ಮಡಿಲಲ್ಲಿ ಇದ್ದಂತೆ ಭಾಸವಾಗುತ್ತದೆ. ಕೊರೋನಾ ಲಸಿಕೆಯೇ ಸದ್ಯ ಸುದ್ದಿಯಲ್ಲಿರುವಾಗಲೇ ಅಪರೂಪದ ಲಸಿಕಾ ತಯಾರಿಕೆ ಕೇಂದ್ರವೇ ಬೆಳಗಾವಿಯಾಗಿತ್ತು ಎಂಬುದು ಬೆಳಗಾವಿಗರಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ.

ಅಶೋಕ ಚಂದರಗಿ
ಹಿರಿಯ ಪತ್ರಕರ್ತರು. ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ.

 

key words : belgavi-vaccine-making-center-a-hundred-years-ago