Sunday, August 23, 2026

BDA Apartments

Home Front Page ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ ಗೆ ಉಳಿಗಾಲವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟ...

ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ ಗೆ ಉಳಿಗಾಲವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ..

ಬೆಳಗಾವಿ,ಸೆ,28,2019(www.justkannada.in): ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ ಗೆ ಉಳಿಗಾಲವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ‌‌ ಸಚಿವ ರಮೇಶ್ ಜಾರಕಿಹೊಳಿ, ಸರಕಾರ ಬಿದ್ದಿರುವುದು ನಮ್ಮಿಂದಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ. ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಈಗ 80 ಶಾಸಕರು ಆಯ್ಕೆ ಆಗಿ ಬಂದಿದ್ದಾರೆ. ಆದ್ರೆ ಇವರೇ ನಾಯಕರಾಗಿ ಮುಂದುವರೆದರೇ ಮುಂದಿನ ಚುನಾವಣೆಯಲ್ಲಿ 30 ಜನ ಶಾಸಕರಾಗಿ ಆಯ್ಕೆ ಆಗುವುದು ಕಷ್ಟ ಎಂದು  ಎಚ್ಚರಿಕೆ ಕೊಟ್ಟರು.

ನಾಯಕ ಎನಿಸಿಕೊಳ್ಳುವವರು ಒಂದು ಕಡೆ ಸೋಲತಾರೆ. ಇನ್ನೊಂದ ಕಡೆ ಆರಿಸಿ ಬರತಾರೆ. ಅಂತವರು ಹೇಗೆ ನಾಯಕರರಾದ್ರೋ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹೇಸರು ಹೇಳದೆ ರಮೇಶ ಜಾರಕಿಹೊಳಿ ಪರೋಕ್ಷ ವಾಗ್ದಾಳಿ ನಡೆಸಿದರು.

ಈ ನಾಯಕರು ನಮ್ಮನ್ನ ಕರೆದು ಒಂದು ದಿನವು ಸರಿಯಾಗಿ ಮಾತನಾಡಿಲ್ಲ. ಕರೆದ್ರು ಸರಿಯಾಗಿ ಮಾತನಾಡಿಲ್ಲ. ಮಾತನಾಡಿದ್ರು ನಮ್ಮನ್ನ ದಬಾಯಿಸೊದು. ನಮಗಿಂತ ಮೊದಲು ಸರಕಾರ ಅವರಿಗೆ ಬಿಳಬೇಕಾಗಿತ್ತು. ಹಾಗೇನಾದ್ರು ಅವರು ಮಾತನಾಡಿದ್ದಾರೆ ಅಂದ್ರೆ ನಾನು ರಾಜಕೀಯ ನಿವೃತ್ತಿ ಪಡಿತೀನಿ. ಒಬ್ಬನ ಕಪಿಮುಷ್ಠಿಯಲ್ಲಿ ಕಾಂಗ್ರೆಸ್ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Key words: belagavi- Ramesh jarkiholi-tong-former CM-siddaramaiah-congress