ಅ.1 ರಿಂದ ಪ್ರಾರಂಭವಾಗುವ ಯುವ ದಸರಾದಲ್ಲಿ ತಾರೆಯರ ಮೆರಗು: ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ…

ಮೈಸೂರು,ಸೆ,28,2019(www.justkannada.in): ಯುವಕರ ಮನ ತಣಿಸುವ ಯುವದಸರಾದಲ್ಲಿ ಈ ಬಾರಿಯೂ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ತಾರೆಯರು ಮೆರಗು ನೀಡಲಿದ್ದಾರೆ.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 1ರಿಂದ 6 ರವರೆಗೆ ನಡೆಯಲಿರುವ ಯುವ ದಸರಾ ಕಾರ್ಯಕ್ರಮವನ್ನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಉದ್ಘಾಟಿಸಲಿದ್ದಾರೆ  ಇಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಯುವ ದಸರಾ, ಯೋಗ ದಸರಾ ಪೋಸ್ಟರ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು,  ಖ್ಯಾತ ಬಾಲಿವುಡ್ ಗಾಯಕರು ಹಾಗೂ ಸ್ಯಾಂಡಲ್ ವುಡ್ ಗಾಯಕರಿಂದ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 1 ರಂದು ಬಾಲಿವುಡ್ ಗಾಯಕ ಗುರು ರಾಂಧವ ತಂಡ  ಕಾರ್ಯಕ್ರಮ ನಡೆಸಿಕೊಟ್ಟರೇ, ಅ2 ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಕಾರ್ಯಕ್ರಮವಿರುತ್ತದೆ ಎಂದು ಮಾಹಿತಿ ನೀಡಿದರು.

ಅ.1ರಿಂದ ಅ.6ರವರೆಗಿನ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ.

ಅ.1 ರಂದು ಬಾಲಿವುಡ್ ಗಾಯಕ ಗುರು ರಾಂಧವ ತಂಡದಿಂದ ಕಾರ್ಯಕ್ರಮ.

ಅ.2 ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್,

ಅ.3 ರಂದು ಮೋನಾಲಿ ಠಾಕೂರ್,

ಅ.4 ರಂದು ಸ್ಯಾಂಡಲ್ ವುಡ್ ಗಾಯಕರಾದ ಸಂಚಿತ್ ಹೆಗ್ಡೆ ಮತ್ತು ಚಂದನ್ ಶೆಟ್ಟಿ.

ಅ.5 ರಂದು ಸ್ಯಾಂಡಲ್ ವುಡ್ ನೈಟ್ಸ್.

ಅ.6 ರಂದು ಬಾಲಿವುಡ್ ಗಾಯಕ ಪ್ರೀತಂ ಚಕ್ರವರ್ತಿ ತಂಡದಿಂದ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರ ಮೆರಗು ನೀಡಲಿದ್ದಾರೆ. ಖ್ಯಾತ ನಟ ದರ್ಶನ್, ಡಾಲಿ ಧನಂಜಯ, ದಿಗಂತ್, ಸಾಧುಕೋಕಿಲ, ರಕ್ಷಿತ್ ಶೆಟ್ಟಿ ಮುಂದಾದ ತಾರೆಯರು ಸ್ಯಾಂಡಲ್ ವುಡ್ ನೈಟಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Key words: mysore dasara-2019-yuvadasara-minister –V.somanna-release-poster