Friday, October 30, 2026

Dasara Wishes

'Hassanambe' DasraWishes_JK DasraWishes JK
Happy Dasara
Home Front Page ಮತ್ತೆ ಮಾಸ್ಕ್: ಮರೆತು ರಸ್ತೆಗಿಳಿದೀರಾ ಜೋಕೆ, ಜೇಬಿಗೆ ಬೀಳುತ್ತೆ ಕತ್ತರಿ !!

ಮತ್ತೆ ಮಾಸ್ಕ್: ಮರೆತು ರಸ್ತೆಗಿಳಿದೀರಾ ಜೋಕೆ, ಜೇಬಿಗೆ ಬೀಳುತ್ತೆ ಕತ್ತರಿ !!

ಬೆಂಗಳೂರು, ನವೆಂಬರ್ 2021 (www.justkannada.in): ಮಾಸ್ಕ್ ಮರೆತು ರೋಡಿಗೆ ಬಂದೀರಾ ಜೋಕೆ..! ಇದೀಗ ಮತ್ತೆ ಮಾರ್ಷಲ್ ಗಳು ಅಖಾಡಕ್ಕಿಳಿದಿದ್ದು, ದಂಡ ವಿಧಿಸುತ್ತಿದ್ದಾರೆ.

ಹೌದು. ಮತ್ತೆ ರೂಪಾಂತರಿ ಕೊರೋನಾ ಆತಂಕ ಎಲ್ಲೆಡೆ ಮನೆ ಮಾಡಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.

ಈ ಮೊದಲು ಜಾರಿಗೆ ತಂದಿದ್ದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಇದೀಗ ಮತ್ತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಇದೀಗ ಬೆಂಗಳೂರು ಜನತೆಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾರ್ಷಲ್ ಗಳು ಮತ್ತೆ ಫೀಲ್ಡ್​ಗೆ ಇಳಿದು ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಕೆ ಆರ್ ಮಾರ್ಕೆಟ್ ನಲ್ಲಿ ಫೀಲ್ಡ್ ಗೆ ಇಳಿದ ಮಾರ್ಷಲ್ ಗಳು, ದಕ್ಷಿಣ ಆಫ್ರಿಕಾದ ಹೊಸ ವೈರಾಣು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕದವರಿಗೆ ಫೈನ್ ಹಾಕಲು ಮುಂದಾಗಿದ್ದಾರೆ.