ಬಿಬಿಎಂಪಿ ಆಯುಕ್ತ ಸ್ಥಾನದಿಂದ ಅನಿಲ್ ಕುಮಾರ್ ಎತ್ತಂಗಡಿ: ಮಂಜುನಾಥ್ ಪ್ರಸಾದ್ ನೇಮಕ…

ಬೆಂಗಳೂರು,ಜು,18,2020(www.justkannada.in): ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಬಿಬಿಎಂಪಿ ಆಯುಕ್ತ ಸ್ಥಾನದಿಂದ ಅನಿಲ್ ಕುಮಾರ್ ಅವರನ್ನ ಎತ್ತಂಗಡಿ ಮಾಡಿ ಆ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್ ಅವರನ್ನ ನೇಮಕ ಮಾಡಲಾಗಿದೆ.

ಕರೋನಾ ನಿಯಂತ್ರಣ ವಿಚಾರದಲ್ಲಿ ಬಿ.ಹೆಚ್‌ ಅನಿಲ್‌ ಕುಮಾರ್‌  ವಿಫಲ ಹಿನ್ನೆಲೆ  ಬಿಬಿಎಂಪಿ ಆಯಕ್ತ ಸ್ಥಾನದಿಂದ ಕೋಕ್ ನೀಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಅನಿಲ್‌ ಕುಮಾರ್‌ ಅವರ  ಸ್ಥಾನಕ್ಕೆ ಮಂಜುನಾಥ್‌ ಪ್ರಸಾದ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.bbmp-commissioner-anil-kumar-transfer-manjunath-prasad-appointed

ಮಂಜುನಾಥ್ ಪ್ರಸಾದ್ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇನ್ನು ಮಂಜುನಾಥ್ ಪ್ರಸಾದ್ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು

Key words: BBMP Commissioner- Anil Kumar- transfer -Manjunath Prasad –appointed