Sunday, September 20, 2026

BDA Apartments

ಸದನದಲ್ಲಿ ಹುಲಿಯಾ V/S ರಾಜಾಹುಲಿ ಮಾತಿನ ಸಮರ BDA JK_Adv BDA Adv
Home Front Page ಸದನದಲ್ಲಿ ಹುಲಿಯಾ V/S ರಾಜಾಹುಲಿ ಮಾತಿನ ಸಮರ..

ಸದನದಲ್ಲಿ ಹುಲಿಯಾ V/S ರಾಜಾಹುಲಿ ಮಾತಿನ ಸಮರ..

ಬೆಂಗಳೂರು, ಫೆ.05, 2021 : (www.justkannada.in news) : ಮುಂಬರುವ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಬಹು ದೊಡ್ಡ ಅಂತರದಿಂದ ಗೆಲ್ಲಲಿದೆ. ನಿಮ್ ಕೈಯಲ್ಲಿ ಸಾಧ್ಯವಾದರೆ ನೀವು ಗೆದ್ದು ತೋರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿಎಂ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದರು.jk
ವಿಧಾನಸಭೆಯಲ್ಲಿ ಮೊದಲಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರದ ವೈಫಲ್ಯ, ಮುಖ್ಯಮಂತ್ರಿ ಯಡಿಯೂರಪ್ಪರ ಅಧಕ್ಷತೆ ಬಗ್ಗೆ ಟೀಕಿಸಿದರು, ಇದಕ್ಕೆ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಮಾತನಾಡಿ ಹೇಳಿದಿಷ್ಟು…
2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸದ್ಯದಲ್ಲೇ ಮಸ್ಕಿ, ಸಿಂಧಗಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಇದರಲ್ಲೂ ನಾವು ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದೇವೆ.bangalore-yadiyurappa-karnataka-bjp-congress-siddaramiaha
ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ, ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಏಕೆಂದರೆ ಜನ ಕಾಂಗ್ರೆಸ್ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿ ನಿಮಗೆ ಸಾಧ್ಯವಾದರೆ ಈ ಚುನಾವಣೆಗಳನ್ನು ಗೆದ್ದು ತೋರಿಸಿ ಎಂದು ಬಹಿರಂಗ ಸವಾಲು ಹಾಕಿದರು.
ಕಳೆದ ಆರು ತಿಂಗಳಿಂದ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ
ನನಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬೆಂಬಲ ಇರುವ ತನಕ , ಜನರ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ. ಇಂತಹ ನೂರು ಕೇಸು ಹಾಕಲಿ, ಎದುರಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

key words : bangalore-yadiyurappa-karnataka-bjp-congress-siddaramiaha