ಸಿಎಂ ಬಿಎಸ್ ವೈ ಜತೆ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕಿದ ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ನ,10,2019(www.justkannada.in):  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ  ಮಾಜಿ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ವೀರಭದ್ರನಗರದಲ್ಲಿ ಸುವರ್ಣಭವನ ಶಂಕುಸ್ಥಾಪನಾ ಕಾರ್ಯಕ್ರವನ್ನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು  ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಪಾಲ್ಕೊಂಡಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ ಸುವರ್ಣಭವನದ ಶಂಕುಸ್ಥಾಪನೆ ನೆರವೇರಿಸುತ್ತಿದ್ದಂತೆ ಸಿದ್ದರಾಮಯ್ಯ ವೇದಿಕೆಗೆ ಆಗಮಿಸದೆ ವಾಪಸ್ ತೆರಳಿದರು.

ಮುಖ್ಯಮಂತ್ರಿ ಬರುವ ಮೊದಲೇ ಹೊರಡಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮುಖ್ಯಸ್ಥರು ಸಿದ್ಧರಾಮಯ್ಯರನ್ನ ಸಮಾಧಾನಪಡಿಸಿದ್ದಾರೆ. ನಂತರ ಶಂಕುಸ್ಥಾಪನೆಕಾರ್ಯ ನೆರವೇರಿದ ಕೂಡಲೇ ಸಿದ್ಧರಾಮಯ್ಯ ವೇದಿಕೆಗೆ ಆಗಮಿಸದೆ ಸ್ಥಳದಿಂದ ತೆರಳಿದರು.

Key words: Bangalore-suvarna bhavan- Former CM Siddaramaiah -hesitant -share – CM BS yeddyurappa