ತಂಬಾಕು ದರ ಪರಿಷ್ಕರಣೆಗೆ ಆಗ್ರಹ: ಮಾರುಕಟ್ಟೆ ಬಂದ್ ಮಾಡಿ ರೈತರಿಂದ ಪ್ರತಿಭಟನೆ…

ಮೈಸೂರು,ನ,10,2019(www.justkannada.in): ತಂಬಾಕು ದರ ಪರಿಷ್ಕರಣೆಗೆ ಆಗ್ರಹಿಸಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ  ತಂಬಾಕು ಮಾರುಕಟ್ಟೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಐದು ವರ್ಷಗಳಿಂದ ತಂಬಾಕು ದರ ಏರಿಕೆಯಾಗದ ಹಿನ್ನೆಲೆ ದರ ಪರಿಷ್ಕರಣೆಗೆ ತಂಬಾಕು ಬೆಳೆಗಾರರು ಪಟ್ಟು ಹಿಡಿದಿದ್ದು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾತೆ. ಈ ನಡುವೆ ಇಂದೂ ಸಹ ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಾರುಕಟ್ಟೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಬಾಕು ಬೆಳೆಗಾರರು ಮೂರು‌ ದಿನಗಳಿಂದ ಪ್ರತಿಭಟಿಸಿದರೂ‌ ತಂಬಾಕು ಮಂಡಳಿ ಸ್ಪಂದಿಸದ ಕಾರಣ ತಂಬಾಕು ಮಂಡಳಿ ಕಚೇರಿಗೆ ಬೀಗ ಹಾಕಿ  ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಹೀಗೆ ತಂಬಾಕು ಬೆಳೆಗಾರರ. ಸಂಕಷ್ಟದಲ್ಲಿದ್ದರೂ  ಮೈಸೂರು ಸಂಸದ ಪ್ರತಾಪಸಿಂಹ ಮಾತ್ರ ತಂಬಾಕು ಬೆಳೆಗಾರರ ಸಹಾಯಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: Demand  tobacco rate- revision-Protests – farmers –mysore- Piriyapatna