2023ರಿಂದ ಬಾರ್ ಕೋಡ್ ಇಲ್ಲದೇ ಯಾವುದೇ ಔಷಧ ಮಾರಾಟ ನಿಷೇಧ: ಕೇಂದ್ರ ಸರಕಾರದ ಆದೇಶ

ಬೆಂಗಳೂರು, ಡಿಸೆಂಬರ್ 04, 2022 (www.justkannada.in): ಬಾರ್ ಕೋಡ್ ಇಲ್ಲದೇ ಯಾವುದೇ ಔಷಧವನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಸೂಚನೆ ನೀಡಿದೆ.

ಬಾರ್ ಕೋಡ್ ಅಳವಡಿಕೆಯಿಂದ ಔಷಧದ ಅಧಿಕೃತತೆ ಮತ್ತು ಅದನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಈ ಕುರಿತು ಸ್ಪಷ್ಟವಾಗಿ ಆದೇಶ ಪಾಲಿಸಬೇಕು ಎಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ.

2023ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಬಾರ್ ಕೋಡ್ ಅಳವಡಿಕೆಯನ್ನು ಔಷಧಗಳ ಆಧಾರ್ ಕಾರ್ಡ್ ಎಂದೇ ಗುರುತಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಮಿಸ್ಟ್ ಅಂಗಡಿಗಳಲ್ಲಿ ಪ್ರಚಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ.