ಬಿಜೆಪಿ ಸಿಎಂಗಳು ಇಸ್ಪಿಟ್ ಎಲೆಗಳಂತೆ: ಯಾವಾಗ ಬೇಕಾದರೂ ಬದಲಾಗಬಹುದು ಎಂದ ಎಚ್.ಸಿ.ಮಹದೇವಪ್ಪ

ಬೆಂಗಳೂರು, ನವೆಂಬರ್ 30, 2021 (www.justkannada.in): ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಬಿಜೆಪಿ ಸರಕಾರದ ಸಿಎಂಗಳನ್ನು ಇಸ್ಪಿಟ್ ಎಲೆಗಳಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಸಿಎಂ ಗಳು ಇಸ್ಪಿಟ್ ಎಲೆಗಳಂತೆ ಒಂದಾದಮೇಲೆ ಒಂದರಂತೆ ಬದಲಾಗುತ್ತಿರುತ್ತಾರೆ ಎಂದು ಟೀಕಿಸಿರುವ ಮಹದೇವಪ್ಪ ಅವರು, ಕಣ್ಣು ಮಿಟುಕಿಸುವುದರೊಳಗಾಗಿ ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಾಯಿಸಿ ಬಿಡುತ್ತದೆ ಎಂದಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಆದಷ್ಟು ಬೇಗ ಮುರುಗೇಶ್ ನಿರಾಣಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮೇಲಿನ ಮಾತುಗಳನ್ನಾಡಿದ್ದಾರೆ.

ಈ ಸರ್ಕಾರಕ್ಕೆ ಸ್ಥಿರತೆ ಇರಲಿದೆಯಾ, ಹೀಗಾಗಿ ಸಹಜವಾಗಿ ಇಸ್ಪಿಟ್ ಎಲೆಯಂತೆ ಒಂದಾದ ಮೇಲೊಂದರಂತೆ ಬದಲಾಗುತ್ತಿರುತ್ತಾರೆ. ಅಂತಿಮವಾಗಿ ನಷ್ಟವಾಗೋದು ರಾಜ್ಯಕ್ಕೆ ಎಂದಿದ್ದಾರೆ.