ಲೋಕಸಭಾ ಚುನಾವಣೆಯಲ್ಲಿ ಕೈ ಹಿನ್ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣರಲ್ಲ : ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್.

 

ಮೈಸೂರು, ಜೂ.16, 2019 : (www.justkannada.in news) : ವಿರೋಧ ಅಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಯಿತು ಅಷ್ಟೇ, ಆದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳಲಾಗದು.

ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಹಿನ್ನೆಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪರ ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಹೇಳಿಕೆ.

ಕೆ.ಆರ್ ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಆಯೋಜಿಸಿದ್ದ ದಿ.ಮಂಚನಹಳ್ಳಿ ಮಹದೇವು ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಒಟ್ಟಾರೆ ಹೇಳಿದಿಷ್ಟು..

ಸಿದ್ದರಾಮಯ್ಯ ವಿರುದ್ಧವೇ ಗೂಬೆ ಕೂರಿಸುವ ಕೆಲಸವಾಗ್ತಿದೆ. ಆದರೆ ಸಿದ್ದರಾಮಯ್ಯ ಶ್ರಮದಿಂದಲೇ ಮೈತ್ರಿ ಸರ್ಕಾರ ಮುನ್ನೆಡೆಯುತ್ತಿದೆ. ಸಿದ್ದು ಅವರು ಸಮನ್ವಯ ಸಮಿತಿಯಲ್ಲಿ ಇಲ್ಲದಿದ್ದರೆ ಮೈತ್ರಿ ಸರ್ಕಾರ ಕಷ್ಟ ಸಾಧ್ಯವಾಗುತ್ತಿತ್ತು. ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಅತ್ಯಧಿಕ ಉತ್ತಮ ಯೋಜನೆಗಳನ್ನ ಕೈಗೊಂಡಿದ್ದರು ಆದರೂ ಸೋಲುಂಟಾಯಿತು. ಸಿದ್ದು ಅವರ ಆಡಳಿತ ಕಾರ್ಯವೈಖರಿ, ಜನಪರ ಯೋಜನೆಗಳು ರಾಜ್ಯದ ಜನತೆಗೆ ಹಾಗೂ ಮೈಸೂರು ಭಾಗದ ಜನರಿಗೆ ಗೊತ್ತಿದೆ.

——–

key words : mysore-congress-leader-aicc-ishwarya-mahadev-election