ಬಾಲು ನಿಧನ : ಪ್ರತಿಕ್ರಿಯೆಗೆ ‘YES’.ಜಾನಕಿ ‘NO’

ಮೈಸೂರು,ಸೆಪ್ಟೆಂಬರ್,26,2020(www.justkannada.in) : ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ವಿಷಯವು ಗಾಯಕಿ ಎಸ್.ಜಾನಕಿ ಅವರಲ್ಲ್ಲಿ ದಿಗ್ಬ್ರಾಂತಿ ಮೂಡಿಸಿ, ಚಿಂತಾಕ್ರಾಂತರನ್ನಾಗಿಸಿದೆ. ಹೀಗಾಗಿ, ಅವರು ಎಸ್.ಪಿ.ಬಿ ನಿಧನಕ್ಕೆ ಸಂಬಂಧಿಸಿದಂತೆ ಮೌನ ತಾಳಿದ್ದಾರೆ.jk-logo-justkannada-logo

ಮೈಸೂರಿನ ರೆಸಾರ್ಟ್ವ ಒಂದರಲ್ಲಿ ಕೆಳೆದ ಕೆಲ ತಿಂಗಳುಗಳಿಂದ ಎಸ್.ಜಾನಕ, ತಮ್ಮ ಪುತ್ರನೊಂದಿಗೆ ವಾಸ್ತವ್ಯ ಹೂಡಿದ್ದಾರೆ.

Balu,died,respond,YES,Janaki,NO

ಎಸ್ ಪಿ ಬಿ ನಿಧನ ವಾರ್ತೆಯು ಜಾನಕಿ ಅವರನ್ನು ಚಿಂತಾಕ್ರಾಂತರನ್ನಾಗಿಸಿದ್ದು, ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ವಾಸ್ತವ್ಯ ಹೂಡಿರುವ ರೆಸಾರ್ಟ್ನ ಮುಖ್ಯಸ್ಥರ ಮೂಲಕ ಗಾಯಕಿ ಜಾನಕಿ ಅವರನ್ನು ಸಂಪರ್ಕಿಸಲು ‘’ಜಸ್ಟ್ ಕನ್ನಡ’’ ನಡೆಸಿದ ಪ್ರಯತ್ನ ವಿಫಲವಾಗಿದೆ.

ಜಾನಕಿ ಅವರು ನಾನು ಯಾರೊಂದಿಗೂ ಈಗ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ಎಸ್.ಪಿ.ಬಿ ಅವರ ನಿಧನವು ಜಾನಕಿಯವರ ಮೇಲೆ ಗಾಢಪರಿಣಾಮ ಬೀರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Balu,died,respond,YES,Janaki,NO

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ಎಸ್.ಜಾನಕಿಯವರು  ಯುಗಳ ಗೀತೆಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.

ಲಾಕ್ ಡೌನ್ ಗೂ ಕೆಲವು ದಿನಗಳ ಮುಂಚೆ ಜಾನಕಿ ಅವರು ಮೈಸೂರಿನ ರೆಸಾರ್ಟ್ ನಲ್ಲಿರುವುದು ತಿಳಿದು ಎಸ್.ಪಿ.ಬಿ ಅವರು ಖುದ್ದು ಆಗಮಿಸಿ ಜಾನಕಿ ಅವರ ಆರೋಗ್ಯ, ಕುಶೋಲೋಪರಿ ವಿಚಾರಿಸಿಕೊಂಡು ತೆರಳಿದರು.

key words : Balu-died-respond-YES-Janaki-NO