ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ :  ಹಿರಿಯ ನಟಿ ಭಾರತಿ ವಿಷ್ಣುವರ್ಧನ್

ಮೈಸೂರು,ಸೆಪ್ಟೆಂಬರ್,26,2020(www.justkannada.in) : ಎಸ್.ಪಿ.ಬಿಯವರ ನಿಧನ ತುಂಬಾ ನೋವು ತಂದಿದೆ. ನಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಶರೀರ ಇಲ್ಲ. ಶಾರೀರ ಇದೆ ಎಂದು ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಂತಾಪ ಸೂಚಿಸಿದ್ದಾರೆ.jk-logo-justkannada-logo

ಸ್ವರ ಸಾಮ್ರಾಟ ಎಸ್.ಪಿ.ಬಿ ನಿಧನ ಹಿನ್ನೆಲೆ ಮಾತನಾಡಿದ ಅವರು, ಎಸ್.ಪಿ‌.ಬಾಲಸುಬ್ರಹ್ಮಣ್ಯಂ ಮಹಾನ್ ಗಾಯಕರಾಗಿದ್ದು, ಅವರು ಎಂದೆಂದಿಗೂ ಶಾಶ್ವತ. ಕಲಾವಿದರಿಗೆ ಯಾವತ್ತೂ ಸಾವಿಲ್ಲ. ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ಎಂದು ಸ್ಮರಿಸಿದ್ದಾರೆ.

ಎಸ್ ಪಿ ಬಿ ಅವರ ಒಂದೊಂದು ಹಾಡು ಕೇಳಿದ್ರೇ ನಟರೇ ಕಣ್ಮುಂದೆ ಬಂದಂಗಾಗುತ್ತೆ

 

Losing-family-members-Senior-actress-Bharti Vishnuvardhan

ಎಲ್ಲಾ ನಟರಿಗೂ ಹಾಡಿದ್ದಾರೆ. ಅವರ ಒಂದೊಂದು ಹಾಡು ಕೇಳಿದ್ರೇ ಸಾಕು ನಟರೇ ಕಣ್ಮುಂದೆ ಬಂದಂಗಾಗುತ್ತೆ. ನಮಗೂ ಬಾಲು ಅವರಿಗೂ ಬಹಳ ಆತ್ಮೀಯ ನಂಟು. ನಮ್ಮ ಯಜಮಾನರು, ಬಾಲು ಇಬ್ಬರು ಆಪ್ತಮಿತ್ರರು. ವಿಷ್ಣು ಸಿನಿಮಾಗೆ ಹಾಡಬೇಕಾದರೆ, ವಿಷ್ಣು, ಎಸ್.ಪಿ.ಬಿ ಇಬ್ಬರೂ ಡಿಸ್ಕಸ್ ಮಾಡ್ತಿದ್ರು ಎಂದು ನೆನೆದರು.

ನನ್ನ ನೆಚ್ಚಿನ ಹಾಡು ಬಹಳಷ್ಟು 

ನಮ್ಮ ಮನೆಗೆ ಒಮ್ಮೆ ಊಟಕ್ಕೆ ಬಂದಿದ್ರು. ಊಟ ಮುಗಿದ ಬಳಿಕ ಹಾಡಲು ಶುರು ಮಾಡಿದ್ರು. ಮಧ್ಯರಾತ್ರಿವರೆಗೂ ವಿಷ್ಣು, ಎಸ್.ಪಿ.ಬಿ ಇಬ್ಬರೂ ಹಾಡುತ್ತಾ ಸಮಯ ಕಳೆದರು. ಅದು ಎಂದೂ ಮರೆಯಲಾಗದ ನೆನಪು. ಅವರ ಹಾಡುಗಳಲ್ಲಿ ನನ್ನ ನೆಚ್ಚಿನ ಹಾಡು ಬಹಳಷ್ಟಿವೆ. ನೂರೊಂದು ನೆನಪು, ನನ್ನ ಹಾಡು ನನ್ನದು ಅನೇಕ ಹಾಡುಗಳಿವೆ ಎಂದು ಭಾವುಕರಾದರು.

ಎಸ್ ಪಿ ಬಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಪ್ರಾರ್ಥಿಸಿದ್ದಾರೆ.

key words : Losing-family-members-Senior-actress-Bharti Vishnuvardhan