ಮಳೆಗೆ ಮನೆ ಕುಸಿದು ದಂಪತಿ ಸಾವು: ಪುತ್ರನ ರಕ್ಷಣೆ…

ಬಳ್ಳಾರಿ, ಡಿಸೆಂಬರ್,1,2020(www.justkannada.in):    ಬಾರಿ ಮಳೆಗೆ ಮಣ್ಣಿನ ಮನೆ ಕುಸಿದು ದಂಪತಿಗಳಿಬ್ಬರು ಸಾವನ್ನಪ್ಪಿರುವ ಧಾರಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.logo-justkannada-mysore

ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ಆದೋನಿ ಸ್ಟ್ರೀಟ್ ನಲ್ಲಿ ಈ  ಘಟನೆ ನಡೆದಿದೆ. ಕೋಲಣ್ಣ(45) ಸಾವಿತ್ರಿ(40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ದಂಪತಿಯ ಪುತ್ರ ಸಂತೋಷ್ ಮಣ್ಣಿನಡಿ ಸಿಲುಕಿಕೊಂಡಿದ್ದು ಆತನನ್ನ ರಕ್ಷಣೆ ಮಾಡಲಾಗಿದೆ.ballari-House- collapses – rain- protection - son

ಕಳೆದ 2 ದಿನಗಳಿಂದ ನಿವಾರ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಜಿಟಿ ಜಿಟಿ ಮಳೆಯಾಗಿತ್ತು.  ಮಳೆಯಿಂದಾಗಿ ಮಣ್ಣಿನ ಮನೆ ಕುಸಿದಿದ್ದು ಈ ವೇಳೆ ದಂಪತಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದು ಸ್ಥಳಕ್ಕೆ ಕೌಲ್ ಬಜಾರ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: ballari-House- collapses – rain- protection – son