ಪೊಲೀಸರ ಜತೆ ವಾಗ್ವಾದ: ಡಿಸಿ ಆದೇಶಕ್ಕೆ ಸೆಡ್ಡು ಹೊಡೆದು ತಾವು ತೀರ್ಮಾನಿಸಿದ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ರೈತರು- ಕಾರ್ಮಿಕರು

ಮೈಸೂರು,ಡಿಸೆಂಬರ್,1,2020(www.justkannada.in): ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ರೈತ-ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತ-ಕಾರ್ಮಿಕ-ದಲಿತ-ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.logo-justkannada-mysore

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು ಹಾಗೂ ಕಾರ್ಮಿಕರು ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ಸ್ಥಳದ ವಿಚಾರವಾಗಿ ಪೊಲೀಸರ ಜತೆ ಪ್ರತಿಭಟನಾನಿರತ ರೈತರು ವಾಗ್ವಾದ ನಡೆಸಿದ ಘಟನೆ ನಡೆಯಿತು.

ಡಿಸಿ ಕಚೇರಿ 100 ಮೀಟರ್ ವ್ಯಾಪ್ತಿ ಹೊರಗಡೆ ಪ್ರತಿಭಟನೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿ ಸೂಚನೆ ನೀಡಿರದ್ದರು. ಈ ಹಿನ್ನೆಲೆ ಡಿಸಿ ಕಚೇರಿ 100 ಮೀಟರ್ ವ್ಯಾಪ್ತಿಯ ಹೊರಗೆ ಪ್ರತಿಭಟನೆ ನಡೆಸಬೇಕೆಂದು ಪೊಲೀಸರು ಸೂಚನೆ ನೀಡಿದ್ದು, ಈ ವೇಳೆ  ಡಿಸಿ ಆದೇಶಕ್ಕೆ  ರೈತ ಮುಖಂಡರು ಕಿಡಿಕಾರಿದರು.

ಈ ಸಮಯದಲ್ಲಿ ಪೊಲಿಸರ ಜತೆ ವಾಗ್ವಾದಕ್ಕಿಳಿದ ರೈತಮುಖಂಡರು,  ನಾವೇನು ಟೆರರಿಸ್ಟ್ ಗಳಾ..? ಪ್ರಶ್ನಿಸಿ ಡಿಸಿ ಆದೇಶಕ್ಕೆ ಸೆಡ್ಡು ಹೊಡೆದು ರೈತರು ತೀರ್ಮಾನಿಸಿದ ಸ್ಥಳದಲ್ಲೇ ಪ್ರತಿಭಟನಾನಿರತ ರೈತರು ಕಾರ್ಮಿಕರು ಧರಣಿ ನಡೆಸಿದರು. ಪೊಲೀಸರು ಬೇರೆಡೆ ಪ್ರತಿಭಟನೆ ನಡೆಸುವಂತೆ ಸೂಚಿಸಿದರೂ ಕ್ಯಾರೇ ಅನ್ನಲಿಲ್ಲ.

ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾ ನಿರತ ರೈತ ಮುಖಂಡರ ಎಚ್ಚರಿಕೆ…

ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ರೈತರ ಹೋರಾಟಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ  ಕಳೆದ ತಿಂಗಳು 26 ರಂದು ದಿಲ್ಲಿ ಚಲೋಗೆ ತೆರಳಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಅಮಾನುಷವಾಗಿ ರೈತರ ಮೇಲೆ ದಾಳಿ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿಗಲಾಗಿವೆ ಇದು ಕೇವಲ ರೈತ ವಿರೋದಿಯಲ್ಲ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ಈ ಕೂಡಲೇ ಪ್ರಧಾನಿ ರೈತರ ಕ್ಷೇಮ ಕೇಳಬೇಕು.  ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾಲಮನ್ನ, ಬಡ್ಡಿಮನ್ನ ಸೇರಿದಂತೆ ಋಣ ಮುಕ್ತ ಕಾಯ್ದೆ ಯನ್ನು ಜಾರಿಗೆ  ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾ ನಿರತ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ  ಹಿರಿಯ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್ , ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ,ಹೊಸಕೋಟೆ ಬಸವರಾಜ್, ಮರಂಕಯ್ಯ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೆಗೌಡ ,ಕಾರ್ಮಿಕ ಮುಖಂಡರಾದ ಚಂದ್ರಶೇಖರ್ ಮೇಟಿ ಸೇರಿದಂತೆ ಇನ್ನಿತರ ಮುಖಂಡರು ಭಾಗಿಯಾಗಿದ್ದರು.

Key words: mysore- dc office- police- farmers – protest