Sunday, August 23, 2026

BDA Apartments

Home Cinema ಶಿವಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಶುಕ್ರವಾರ (ಆ.20) ಭಜರಂಗಿ ಲಿರಿಕಲ್ ಸಾಂಗ್ ರಿಲೀಸ್

ಶಿವಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಶುಕ್ರವಾರ (ಆ.20) ಭಜರಂಗಿ ಲಿರಿಕಲ್ ಸಾಂಗ್ ರಿಲೀಸ್

ಬೆಂಗಳೂರು, ಆಗಸ್ಟ್ 18, 2021 (www.justkannada.in): ಗಣೇಶ ಹಬ್ಬದಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದ ಶಿವಣ್ಣ ಅಭಿನಯದ ಭಜರಂಗಿ ತಂಡ ಮತ್ತೊ0ದು ಸುದ್ದಿ ಹೊರಹಾಕಿದೆ.

ಹೌದು. ಭಜರಂಗಿ 2 ಸಿನಿಮಾ ತಂಡ ಹೊಸ ಸುದ್ದಿಯೊಂದನ್ನು ಹೊರಹಾಕಿದೆ. ಚಿತ್ರ ಬಿಡುಗಡೆ ಕುರಿತು ಇನ್ನೂ ಗೊಂದಲದಲ್ಲಿರುವ ನಿರ್ಮಾಪಕರು, ಇದೇ ಶುಕ್ರವಾರ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಎ. ಹರ್ಷ ನಿರ್ದೇಶನದ ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಶುಕ್ರವಾರ ಬೆಳಿಗ್ಗೆ 10.05 ಕ್ಕೆ ಬಿಡುಗಡೆಯಾಗಲಿದೆ.

ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ಸಿಗದ ಕಾರಣಕ್ಕೆ ಮತ್ತೆ ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ.