ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ಮೋದಿ ಹೆಸರಿಡಿ: ಬಡವರಿಗೆ 50 ರೂ.ಗೆ ಪೆಟ್ರೋಲ್ ವಿತರಿಸಿ- ಹೆಚ್.ಸಿ ಮಹದೇವಪ್ಪ ಟಾಂಗ್.

ಮೈಸೂರು,ಆಗಸ್ಟ್,18,2021(www.justkannada.in): ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಕಿಡಿಕಾರಿದ್ದಾರೆ.

ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿರುವ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ನರೇಂದ್ರ ಮೋದಿ ಹೆಸರಿಡಿ. ಬಡವರಿಗೆ 50ರೂಪಾಯಿಗೆ ಪೆಟ್ರೋಲ್ ವಿತರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಬಡವರಿಗೆ 10 ರೂಪಾಯಿಗೆ ಊಟ 5 ರೂಪಾಯಿಗೆ ಉಪಹಾರ ನೀಡುವುದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ. ಇವರು ಅವರ ನಾಯಕ ಹಾಗೂ ಸದಾ  ಸುಳ್ಳನ್ನೇ ಆಡುವ ಮೋದಿ ಅವರ ಹೆಸರನ್ನೇ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಇಡಿ. ಬಡವರಿಗೆ 50 ರೂಪಾಯಿಗೆ ಪೆಟ್ರೋಲ್ ವಿತರಿಸಿ ಎಂದು ಟೀಕಿಸಿದ್ದಾರೆ.

ENGLISH SUMMARY….

Name all the petrol bunks in the name of Modi: Provide petrol @ Rs.50 per litre – H.C. Mahadevappa
Mysuru, August 18, 2021 (www.justkannada.in): Responding to the statement by a BJP leader on renaming the name of Indira canteen, former Minister H.C. Mahadevappa has tweeted to rename all the petrol bunks in the name of Modi and provide petrol at the rate of Rs. 50 per liter.
“The BJP leaders won’t like Congress government providing food at the rate of Rs. 10 for lunch and Rs. 5 for breakfast. Hence, I request them to rename all the petrol bunks in the name of their favorite leader Modi, who is a lier but provide petrol at the rate of Rs. 50 per liter,” he tweeted.
Keywords: Former Minister H.C. Mahadevappa/ petrol/ Rs. 50/ rename petrol bunks/ Modi

Key words: Modi -name -all petrol –bunkers-Former minister-H, C Mahadevappa