Monday, August 17, 2026

BDA Apartments

Home Crime ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು…

ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು…

ಬಾಗಲಕೋಟೆ,ಸೆ,20,2019(www.justkannada.in):  ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಮೃತ ಬಾಲಕಿಯ ತಂದೆ ವಿರುದ್ದ ದೂರು ದಾಖಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ತೆರೆದಾಳದಲ್ಲಿ ಈ ಘಟನೆ ನಡೆದಿದೆ. ವೈಷ್ಣವಿ ಮೃತಪಟ್ಟಿರುವ ಬಾಲಕಿ. ಬಾಲಕಿ ತಂದೆ ಧರೆಪ್ಪ ತೆರದಾಳ ವಿರುದ್ದ ವೈಷ್ಣವಿ ತಾಯಿ ವಂದನಾ ಪೋಷಕರು ದೂರು ನೀಡಿದ್ದಾರೆ.

ಧರೆಪ್ಪ ಕಳೆದ ಒಂದು ವರ್ಷದ ಹಿಂದೆ ಪತ್ನಿ ವಂದನಾಳನ್ನ ಹತ್ಯೆಗೈದು ಜೈಲು ಸೇರಿದ್ದ. ನಂತರ ಧರೆಪ್ಪ ಮತ್ತು ವಂದನಾ ಪೋಷಕರ ನಡುವೆ ಹೊಂದಾಣಿಕೆ ಹಿನ್ನೆಲೆ ಕೇಸ್ ಕ್ಲೋಸ್ ಆಗಿತ್ತು. ಬಳಿಕ ಮಗಳನ್ನು ತನಗೆ ನೀಡಬೇಕೆಂದು ತಂದೆ ಧರೆಪ್ಪ ಕೋರ್ಟ್ ಗೆ ಧಾವೆ ಹೂಡಿದ್ದ. ಕೋರ್ಟ್ ಆದೇಶದಂತೆ ಮಗಳು ವೈಷ್ಣವಿಯನ್ನ ಕರೆದೊಯ್ದಿದ್ದ.

ಇದೀಗ ವೈಷ್ಣವಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ತಂದೆ ಧರೆಪ್ಪನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ವಂದನಾ ಪೋಷಕರು ದೂರು ನೀಡಿದ್ದು ತೆರೆದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: bagalakote- Suspicious death -two and  half year- old girl-Complaint