Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ‘ರನ್ ಫಾರ್ ವೃಷಭಾವತಿ’ ಯುವ ಬ್ರಿಗೇಡ್ ಪ್ರಯತ್ನಕ್ಕೆ ಸಾಥ್ ನೀಡಿದ ಯಶ್

‘ರನ್ ಫಾರ್ ವೃಷಭಾವತಿ’ ಯುವ ಬ್ರಿಗೇಡ್ ಪ್ರಯತ್ನಕ್ಕೆ ಸಾಥ್ ನೀಡಿದ ಯಶ್

ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಯುವ ಬ್ರಿಗೇಡ್ ಹೊಸ ಪ್ರಯತ್ನವೊಂದಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದಾರೆ.

ಸೆಪ್ಟೆಂಬರ್ 22 ಭಾನುವಾರ “ಯುವ ಬ್ರಿಗೇಡ್” ವತಿಯಿಂದ “ರನ್ ಫಾರ್ ವೃಷಭಾವತಿ” ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವಂತೆ ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಒಂದು ಕಾಲದ ವೃಷಭಾವತಿ ನದಿ ಈಗ ಕೆಂಗೇರಿ ಮೋರಿಯಾಗಿದೆ. ವೃಷಭಾವತಿ ನದಿ ಪುನಶ್ಚೇತನಕ್ಕಾಗಿ ಯಶ್ ಸಂಪೂರ್ಣ ಸಹಕಾರ ಘೋಷಿಸಿದ್ದಾರೆ.