ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಆರ್.ಬಿ ತಿಮ್ಮಾಪುರ…

ಬಾಗಲಕೋಟೆ,ಜೂ,24,2019(www.justkannada.in): ಸಕ್ಕರೆ ಸಚಿವ. ಆರ್ ಬಿ.ತಿಮ್ಮಾಪೂರ ಅವರು ಸಂಚಾರ ಮಾಡುತ್ತಿದ್ದ ಮಾರ್ಗದಲ್ಲಿಯೇ ರಸ್ತೆ ಅಪಘಾತ ಆಗಿದ್ದು, ಈ ವೇಳೆ ಸಚಿವ ಆರ್.ಬಿ ತಿಮ್ಮಾಪುರ, ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಬಾಗಲಕೋಟೆ ನಗರದಲ್ಲಿ ಜರುಗಿದೆ.

ಮುಧೋಳದಿಂದ ಬಾಗಲಕೋಟೆ ನಗರಕ್ಕೆ ಆಗಮಿಸುವ ಸಮಯದಲ್ಲಿ ನವನಗರದ ಬಾಯ್ ಪಾಸ್ ರಸ್ತೆಯ ಎಚ್ ಪಿ ಪೆಟ್ರೋಲ್ ಪಂಪ್ ಬಳಿ ಬೈಕ್ ಗೂ  ಮತ್ತು ಕಾರಿಗೂ ಅಪಘಾತವಾಗಿ  ಬೈಕ್ ಸವಾರನಿಗೆ ಮತ್ತು ಹಿಂದುಗಡೆ ಕುಳಿತ ಹಿರಿಯ ಮಹಿಳೆಗೆ ತಲೆಗೆ ಪಟ್ಟಾಗಿ ನರಳುತ್ತಿದ್ದರು. ಇದನ್ನು ಗಮನಿಸಿದ ಸಚಿವ ಆರ್.ಬಿ ತಿಮ್ಮಾಪುರ,  ಗಾಯಾಳುಗಳನ್ನ ಕಂಡು ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ, ಕೆಳಗಿಳಿದು ಗಾಯಳುಗಳನ್ನ ನೀರು ಕುಡಿಸಿ ಉಪಚಾರ ಮಾಡುತ್ತಾ, ಧೈರ್ಯ  ಹೇಳಿ ಅಂಬ್ಯುಲೆನ್ಸ್ ಗೆ ಕರೆ ಮಾಡಿಸಿ ಹಿರಿಯ ವೈದ್ಯರನ್ನ ಸಂಪರ್ಕಸಿದರು.

ಅಂಬ್ಯುಲೆನ್ಸ್  ಬರುವುದು ವಿಳಂಬ ಆಗಿದ್ದರಿಂದ  ಬೇರೆ ಗಾಡಿಯಲ್ಲಿ ಆಸ್ಪತ್ರೆಗೆ  ಅವರನ್ನ ಕಳುಹಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮರೆದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಉದಯಸಿಂಗ ಪಡತಾರೆ ಸದುಗೌಡ ಪಾಟೀಲ, ಸತ್ಯಪ್ಪ ತೆಲಿ ಸಚಿವರ ಆಪ್ತರಾದ ಆನಂದ ದೊಡಮನಿ ಅಜಯ ದೇಸಾಯಿ, ಸಚಿವರ ಗನ್ ಮ್ಯಾನ್  ನರಸಿಂಹಮೊರ್ತಿ  ಸಿಬ್ಬಂದಿವರ್ಗ ಸಹ ಉಪಚರಿಸಿದರು.

Key words: bagalakote- Minister -R. B. Thimmapura – Humanity- accident-admit- hospital