ಚಿರ ಯೌವ್ವನದ ಶ್ರೇಯವನ್ನು ಯೋಗಕ್ಕೆ ನೀಡಿದ ಶಿಲ್ಪಾ ಶೆಟ್ಟಿ !

ಬೆಂಗಳೂರು, ಜೂನ್ 24, 2019 (www.justkannada.in): ಕತ್ತು ನೋವಿಗೆ ಪರಿಹಾರ ಕಂಡುಕೊಳ್ಳಲು ಯೋಗದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ ಇದೀಗ ಯೋಗವೇ ಜೀವನವಾಗಿದೆ.

ಶಿಲ್ಪಾ ಸೌಂದರ್ಯದ ಗುಟ್ಟು ಯೋಗ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. 44ರ ಹರೆಯದಲ್ಲೂ ಉಳಿದಿರುವ ಉತ್ತಮ ಆರೋಗ್ಯ, ಸೌಂದರ್ಯ ಮತ್ತು ಚಿರಯೌವ್ವನದ ಶ್ರೇಯವನ್ನು ಯೋಗಕ್ಕೆ ಅರ್ಪಿಸಿದ್ದಾರೆ ಶಿಲ್ಪಾ ಶೆಟ್ಟಿ !

ಯೋಗದಿಂದಾಗಿ ಶಿಲ್ಪಾ ವಯಸ್ಸು ತಿರುಗಿ ಹೊರಟಿದೆ ಎಂದು ಎಲ್ಲರೂ ಛೇಡಿಸುತ್ತಾರೆ. ದೇಹ ಸೌಂದರ್ಯ, ಇನ್ನೂ ಯುವತಿಯಂತೆ ಕಾಣಲು ನಾನು ಯೋಗ ಮಾಡುತ್ತಿಲ್ಲ. ಆಂತರಿಕ ಸೌಂದರ್ಯ ಮತ್ತು ಜೀವನದ ಆನಂದ ಸವಿಯಲು ಯೋಗವನ್ನು ತಪ‍್ಪಸ್ಸಿನಂತೆ ಸ್ವೀಕರಿಸಿದ್ದೇನೆ ಎಂದಿದ್ದಾರೆ ಶಿಲ್ಪಾ ಶೆಟ್ಟಿ.