Monday, September 7, 2026

BDA Apartments

Home Front Page ಮೈಸೂರು: ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಗೆ ಚಾಲನೆ

ಮೈಸೂರು: ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಗೆ ಚಾಲನೆ

ಮೈಸೂರು,ಸೆಪ್ಟಂಬರ್.7,2026 (www.justkannada.in):  ನಗರದ ಬೋಗಾದಿ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಆಯೋಜಿಸಿದ್ದ ಎರಡು ದಿನಗಳ ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಬ್ಯಾಡ್ಮಿಂಟನ್ ಟೂರ್ನಿಯನ್ನು ಕಾಮನ್ ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಉದ್ಘಾಟಿಸಿದರು. ಬಳಿಕ ಮಾತನಾಡಿ, ದಂತ ಚಿಕಿತ್ಸಾ ವೃತ್ತಿಯಲ್ಲಿ ಕೆಲಸ ಮಾಡುವವರು ಒಂದೆಡೆ ಸೇರಲು ಈ ಟೂರ್ನಿ ಅವಕಾಶ ಮಾಡಿಕೊಟ್ಟಿದೆ. ಇನ್ನು ಫಿಟ್ನೆಸ್, ಕ್ರೀಡಾ ಮನೋಭಾವ ಮತ್ತು ಸೌಹಾರ್ದವನ್ನು ಉತ್ತೇಜಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಟೂರ್ನಿಯಲ್ಲಿ ಕರ್ನಾಟಕದ ವಿವಿಧ ಸ್ಥಳೀಯ ಶಾಖೆಗಳಿಂದ 92 ಸದಸ್ಯರು ಪಾಲ್ಗೊಂಡಿದ್ದಾರೆ. ಐಡಿಎ ಮೈಸೂರು ಶಾಖೆಯ ಅಧ್ಯಕ್ಷ ಡಾ.ನರೇಂದ್ರ ಕುಮಾರ್, ಕಾರ್ಯದರ್ಶಿ ಡಾ. ಆರ್.ಜಿ.ರಘು, ಖಜಾಂಚಿ ಡಾ. ಟಿ.ಕೆ.ಸಂದೀಪ್, ಡಾ. ಎನ್.ರಘುನಾಥ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: Mysore,  State-level, badminton tournament,