ಆರೋಗ್ಯದಲ್ಲಿ ಮತ್ತೆ ಏರುಪೇರು, ಅಮೆರಿಕಕ್ಕೆ ತೆರಳಿದ ತಲೈವಾ…!

ಚೆನ್ನೈ,ಜನವರಿ,02,2021(www.justkannada.in) : ತಮಿಳರ ಪಾಲಿನ ತಲೈವಾ, ಭಾರತದ ಸಿನಿ ರಂಗದ ಅನಭಿಶಕ್ತ ದೊರೆಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಮೆರಿಕಕ್ಕೆ ತೆರಳಿದ್ದಾರೆ.jk-logo-justkannada-mysoreಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಹೈದ್ರಾಬಾದ್ ನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪೆಡದಿದ್ದರು. ಈ ಮಧ್ಯೆ ರಕ್ತದೊತ್ತಡ ಏರುಪೇರಾಗಿದ್ದು, ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಹೊರ ಬಂದಿದ್ದರು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ, ರಜನಿ ಮತ್ತೆ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Back-health-Fluctuate-America-Moved-Talaiva ...!

ಅಂದಹಾಗೆ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಬೇಕಿದ್ದ ತಲೈವಾಗೆ ಆರೋಗ್ಯ ಕೈಕೊಟ್ಟಿದೆ. ಇದು ಅವ್ರಿಗೆ ಅತೀವ ನೋವುಂಟು ಮಾಡಿದೆ. ಇದು ರಜನಿಕಾಂತ್ ಅಭಿಮಾನಿಗಳಿಗೂ ನೋವು ತಂದಿದೆ.

key words : Back-health-Fluctuate-America-Moved-Talaiva …!