Thursday, October 8, 2026

BDA Apartments

Home Front Page ಷಡ್ಯಂತ್ರ, ಕುತಂತ್ರ  ಸ್ಟಿಂಗ್ ಆಪರೇಷನ್ ಮಾಡುವ ಕೀರ್ತಿ ರಾಜ್ಯದ ಚುಕ್ಕಾಣಿ ಹಿಡಿದಿರುವವರಿಗೆ ಸಲ್ಲುತ್ತೆ-ಬಿವೈ ವಿಜಯೇಂದ್ರ

ಷಡ್ಯಂತ್ರ, ಕುತಂತ್ರ  ಸ್ಟಿಂಗ್ ಆಪರೇಷನ್ ಮಾಡುವ ಕೀರ್ತಿ ರಾಜ್ಯದ ಚುಕ್ಕಾಣಿ ಹಿಡಿದಿರುವವರಿಗೆ ಸಲ್ಲುತ್ತೆ-ಬಿವೈ ವಿಜಯೇಂದ್ರ

ಬಾಗಲಕೋಟೆ,ಅಕ್ಟೋಬರ್,8,2026 (www.justkannada.in):  ಕುತಂತ್ರ, ಷಡ್ಯಂತ್ರ,, ಸ್ಟಿಂಗ್‌ ಆಪರೇಷನ್‌ ಮಾಡುವಂತಹ ಕೀರ್ತಿ ಈ ರಾಜ್ಯದ ಚುಕ್ಕಾಣಿ ಹಿಡಿದವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ ಶಾಸಕರನ್ನು ಕೇಳಿದರೆ ಅವರೇ ಹೆಸರು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, , ರಮೇಶ್ ಜಾರಕಿಹೊಳಿ ಕೇಸ್ ನಲ್ಲಿ ಸ್ಟಿಂಗ್ ಮಾಡಿದ್ದು ಯಾರು?  ತಮ್ಮ ಶಾಸಕರ ಮೇಲೆಯೇ ಸ್ಟಿಂಗ್ ಮಾಡ್ತಾರೋ?  ಯಾರು ಡಿಂಗ್ ಡಿಂಗ್ ಅಪರೇಷನ್ ಮಾಡಿದ್ದಾರೆ ಎಂದು ಗೊತ್ತಿದೆ ಎಂದು ಕುಟಕಿದರು.

ಸ್ಟಿಂಗ್‌, ಡಿಂಗ್‌ ಆಪರೇಷನ್‌ ಬದಿಗಿಟ್ಟು, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕಾಂಗ್ರೆಸ್‌ ನಾಯಕರಾದ ಎಚ್‌.ಕೆ.ಪಾಟೀಲ್, ಬಸವರಾಜ ರಾಯರಡ್ಡಿ, ಬಿ.ಆರ್‌. ಪಾಟೀಲ ಹೇಳಿಕೆ ಗಮನಿಸಿದ್ದೀರಿ. ಪರಿಸ್ಥಿತಿ ಹೀಗೆ ಮುಂದುವರೆದರೆ, ಕಾಂಗ್ರೆಸ್‌ ನಾಯಕರೇ ದಂಗೆ ಏಳುತ್ತಾರೆ  ಎಂದು ತಿಳಿಸಿದರು.credit by vijayendra

ಸ್ಟಿಂಗ್‌, ಡಿಂಗ್‌ ಆಪರೇಷನ್‌ ಬದಿಗಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಮುಖ್ಯಮಂತ್ರಿ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಜನರು ನೋಡುತ್ತಾರೆ. ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ವಾಸ್ತವ ಪರಿಸ್ಥಿತಿಯೇ ಬೇರೆ ಇದೆ. ಜನರು ಬಿಜೆಪಿ ಕಡೆಗೆ ಒಲುವು ತೋರಿಸುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.credit jk02_new jk02 new

 

English Summary
Title

BY Vijayendra Blasts Congress Over Karnataka Sting Operation Claims

Short Description
Karnataka BJP President B.Y. Vijayendra strongly hit back at Chief Minister D.K. Shivakumar's allegations regarding potential sting operations targeting state ministers. Clarifying recent political remarks, Vijayendra stated that the track record for orchestrating political conspiracies, cunning plots, and sting operations belongs entirely to those at the helm of the ruling Congress government. He asserted that Congress has a long history of utilizing such tactics for political blackmail and internal maneuvers, suggesting that members of the ruling dispensation have historically protected individuals involved in these operations.
Keywords
credit, sting operations, goes, state- Power, B.Y. Vijayendra.