ವಿಜಯಪುರ,ಅಕ್ಟೋಬರ್,8,2026 (www.justkannada.in): ಬಿಜೆಪಿ ಮರು ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಭ್ರಷ್ಟ ರಾಜ್ಯಾಧ್ಯಕ್ಷ ಇರುವವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಬಿಜೆಪಿ ಸತ್ತಿದೆ ವಿಜಯಪುರದಲ್ಲಿ ಹೇಳೋದೆ ಬೇಡ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ವಾಪಸ್ ಕರೆ ತರಲು ಕೆಎಸ್ ಈಶ್ವರಪ್ಪಗೆ ಆಹ್ವಾನಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಜೊತೆ ಯಾರೂ ಮಾತನಾಡಿಲ್ಲ ಯಾರು ನನ್ನ ಸಂಪರ್ಕಿಸಿದಲ್ಲಿ ಇಲ್ಲ. ಬಿಜೆಪಿ ಮರುಸೇರ್ಪಡೆಗೆ ಯಾವುದೇ ಅರ್ಜೆಂಟ್ ಇಲ್ಲ. ವೇಗದೂತ ಬಸ್ ನಲ್ಲಿ ಹೋಗುವಷ್ಟು ಅರ್ಜೆಂಟ್ ಇಲ್ಲ. ಈ ಭ್ರಷ್ಟ ರಾಜ್ಯಾಧ್ಯಕ್ಷ ಇರುರವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದರು.






