ಟಿಕ್​ಟಾಕ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್​ ಡೇವಿಡ್ ವಾರ್ನರ್ ಫುಲ್​ ಹವಾ

ಬೆಂಗಳೂರು, ಜೂನ್ 09, 2020 (www.justkannada.in): ಟಿಕ್​ಟಾಕ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ​​ಮನ್​ ಡೇವಿಡ್ ವಾರ್ನರ್ ಫುಲ್​ ಹವಾ ಕ್ರಿಯೇಟ್ ಮಾಡಿದ್ದಾರೆ!

ವಾರ್ನರ್​ರ​ ಒಂದೊಂದು ವಿಡಿಯೋಗೂ, ಲಕ್ಷ​ಗಟ್ಟಲೇ ವೀವ್ಸ್​, ಲಕ್ಷಗಟ್ಟಲೇ ಲೈಕ್ಸ್​ ಬರುತ್ತಿವೆ. ಸದ್ಯ ವಾರ್ನರ್​ರ ಎಲ್ಲಾ ವೀಡಿಯೋ ಸೇರಿಸಿ ಒಟ್ಟು 89 ಮಿಲಿಯನ್​, ಅಂದ್ರೆ 8.9 ಕೋಟಿ ವೀವ್ಸ್​ ಪಡೆದುಕೊಂಡಿವೆ.

ಕೇವಲ ಎರಡೂವರೆ ತಿಂಗಳಲ್ಲಿ ವಾರ್ನರ್​, ಸುಮಾರು 40 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇದರಿಂದ ಸಖತ್​ ಖುಷಿ ಆಗಿರೋ ಸನ್​ರೈಸರ್ಸ್ ಹೈದ್ರಾಬಾದ್​ ತಂಡದ​ ಕ್ಯಾಪ್ಟನ್​ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇತ್ತೀಚಿಗೆ ಭಾರತದ ಜೋಡಿ ಮಾಡಿರೋ ಟಿಕ್​ಟಾಕ್​ ವೀಡಿಯೊಗೆ, ವಾರ್ನರ್​ ತಮ್ಮ ಪತ್ನಿ ಕ್ಯಾಂಡೀಸ್ ಜೊತೆಗೂಡಿ ಡ್ಯೂಯೆಟ್​ ಮಾಡಿದ್ದಾರೆ. ಅಲ್ಲು ಅರ್ಜುನ್​ ಅಭಿನಯದ ಚಿತ್ರದ ಜನಪ್ರಿಯ ಗೀತೆ ಬುಟ್ಟಾ ಬೊಮ್ಮಾ ಹಾಡಿಗೆ ವಾರ್ನರ್ ಮಾಡಿದ್ದ ವೀಡಿಯೊ, ಫುಲ್​ ವೈರಲ್ ಆಗಿತ್ತು.