ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್’ಗೆ ಕೊರೊನಾ ಸೋಂಕು

ಸಿಡ್ನಿ, ಜೂನ್ 09, 2020 (www.justkannada.in): ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೊರೊನಾ ಸೋಂಕು ತಗುಲಿದೆ.

ಆಸೀಸ್ ಫುಟ್ ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ ಜೆ ಲೀಗ್ ಪ್ರಥಮ ದರ್ಜೆ ಡಿವಿಷನ್ ಫುಟ್ ಬಾಲ್ ಲೀಗ್ ನಲ್ಲಿ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಇವರಿಗೆ ಕೋವಿಡ್ 19 ಸೋಂಕು ತಾಗಿದೆ ಎಂಬ ಬಗ್ಗೆ ವರದಿಯಾಗಿದೆ.

ಈ ಪ್ರಕರಣದೊಂದಿಗೆ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ ಎರಡನೇ ಆಟಗಾರನಿಗೆ ಕೋವಿಡ್- 19 ಸೋಂಕು ತಾಗಿದಂತಾಗಿದೆ.