3ನೇ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಜನಾಂಗೀಯ ನಿಂದನೆ: ಆಸಿಸ್ ಕ್ರಿಕೆಟ್ ಮಂಡಳಿ ಕ್ಷಮೆಯಾಚನೆ

ಸಿಡ್ನಿ, ಜನವರಿ 10, 2020 (www.justkannada.in): ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿದೆ.

ಇಂಥಹ ನಡವಳಿಕೆಯನ್ನು ಖಂಡಿಸಿದ್ದು, ದುರ್ವತನೆ ತೋರಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದೆ.

ಸಿಡ್ನಿ(Sydney) ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಆಟಗಾರರಾದ ಜಸ್ ಪ್ರೀತ್ ಬೂಮ್ರಾ (Jasprit Bumrah )ಮತ್ತು ಮಹಮ್ಮದ್ ಸಿರಾಜ್ (Mohammed Siraj)ವಿರುದ್ಧ ಜನಾಂಗೀಯ ನಿಂದನೆ ಕೇಳಿ ಬಂದಿತ್ತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಕುಡಿದ ಅಮಲಿನಲ್ಲಿ ಜಸ್ ಪ್ರೀತ್ ಬೂಮ್ರಾ ಮತ್ತು ಮಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು.

ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ತಾವು ಟೀಂಇಂಡಿಯಾದ (Team India)ಕ್ಷಮೆಯಾಚಿಸುವುದಾಗಿ ಹೇಳಿದೆ.