ತಾಯಿ ನೆನಪಿಗಾಗಿ ಐಎಎಸ್ ಆಕಾಂಕ್ಷಿಗಳಿಗೆ ನೆರವು: ಸೋನು ಸೂದ್ ಘೋಷಣೆ

ಬೆಂಗಳೂರು, ಅಕ್ಟೋಬರ್ 15, 2020 (www.justkannada.in): ನಟ ಸೋನು ಸೂದ್ ಐಎಎಸ್ ಆಕಾಂಕ್ಷಿಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ .

ಹೌದು. ನೊಂದವರಿಗೆ ಸ್ಪಂದಿಸುವ ಮೂಲಕ ರಿಯಲ್ ಹೀರೋ ಎಂದು ಕರೆಸಿಕೊಳ್ಳುತ್ತಿರುವ ಸೋನು ಸೂದ್ ಇದೀಗ ಮತ್ತೊಂದು ಒಳ್ಳೆಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಈ ನಟ, ಅ .13 ರಂದು ನನ್ನ ತಾಯಿ ಮೃತಪಟ್ಟಿದ್ದರು . ಅವರ ಪುಣ್ಯಸ್ಮರಣೆಯೊಂದಿಗೆ ಐಎಎಸ್ ಆಕಾಂಕ್ಷಿಗಳಿಗೆ ನೆರವಾಗುವ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಪ್ರೊ.ಸರೋಜ್ ಸೂದ್ ಸ್ಕಾಲರ್‌ಶಿಪ್ ಮೂಲಕ ಐಎಎಸ್ ಆಕಾಂಕ್ಷಿಗಳು ಅವರ ಗುರಿ ತಲುಪಲು ನೆರವಾಗಲಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.